ಕನ್ನಡ ನಾಡು, ನುಡಿ ವಿಷಯವಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಕಾರವಾರದಲ್ಲಿ ಕನ್ನಡ ಕಲರವ ಮೊಳಗಿಸಿದೆ. ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಪುರಸ್ಕರಿಸಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮತ್ತು ಕಾರವಾರ ತಾಲೂಕು ಘಟಕದಿಂದ ಭಾನುವಾರ ಕಾರವಾರ ನಗರದ ಹಿಂದೂ ಪ್ರೌಢಶಾಲೆ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್ ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪ್ರೌಢಶಾಲೆ ಹಂತದಲ್ಲೇ ಪ್ರಯತ್ನ ಆರಂಭಿಸಬೇಕು. ಕನ್ನಡ ಕಲಿಕೆಯನ್ನು ಎಂದಿಗೂ ಕೈಬಿಡಬಾರದು’ ಎಂದು ಕರೆ ನೀಡಿದರು. ಮಕ್ಕಳ ಮೊಬೈಲ್ ಬಳಕೆ ಹಾಗೂ ಅದರ ಅಪಾಯಗಳ ಬಗ್ಗೆ ಅವರು ಪಾಲಕರಿಗೆ ಮನವರಿಕೆ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ನಾಯ್ಕ ಮಾತನಾಡಿ `ಎಷ್ಟೇ ಉನ್ನತ ಹುದ್ದೆಗೆ ಏರಿದರೂ ಮಾತೃಭಾಷೆ ಮರೆಯಬಾರದು. ನಾಡಭಾಷೆಯ ಜೊತೆಗೆ ಹಿಂದಿ, ಇಂಗ್ಲಿಷ್ ಕಲಿಕೆಗೆ ಅವಕಾಶಗಳಿವೆ’ ಎಂದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ `ರಾಜ್ಯದ ಗಡಿಭಾಗದಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸಲು ಶಿಕ್ಷಕರ ಪ್ರಯತ್ನ ಅಗತ್ಯ’ ಎಂದರು. ಸಾಹಿತಿ ಶ್ರೀದೇವಿ ಕೆರೆಮನೆ ಮಾತನಾಡಿ `ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸ್ಪರ್ಧಾತ್ಮಕ ಪ್ರಪಂಚಕ್ಕೆ ಕೊಂಡಯ್ಯೊವ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ ಫರ್ನಾಂಡಿಸ್ `ಕನ್ನಡ ಭಾಷೆಗೆ ಹೆಚ್ಚಿನ ಕೃತಿಗಳು ಬರಬೇಕು. ಅದರ ಪ್ರಕಟಣೆಗೆ ನಮ್ಮ ಸಹಕಾರ ನಿರಂತರ’ ಎಂದರು.
ಗೌರವಾನ್ವಿತ ಅತಿಥಿಗಳಾದ್ದ ಪ್ರೇಮಾ ಡಿ ಎಮ್ ಆರ್ `ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವಾಕಾಂಕ್ಷೆಯ ನೋಟವು ನನ್ನನ್ನು ಬೆರಗುಗೊಳಿಸಿದೆ’ ಎಂದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಜೈರಂಗನಾಥ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ ಎನ್ ವಾಸರೆ `ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಕನ್ನಡದ ಬೀಜ ಬಿತ್ತುವ ಪ್ರಯತ್ನ ನಡೆದಿದೆ. ಈ ಕಾರ್ಯಕ್ರಮಕ್ಕೆ ದಾನಿಗಳ ಸಹಕಾರ ಅತಿದೊಡ್ಡದು’ ಎಂದರು. ಈ ವರ್ಷ 825 ವಿದ್ಯಾರ್ಥಿಗಳನ್ನು ಗೌರವಿಸುವುದಾಗಿ ಘೋಷಿಸಿದರು.
ಸಾಧನೆ ಮಾಡಿದ 41 ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗೌರವಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲಕು ಘಟಕದ ಅಧ್ಯಕ್ಷ ಆರ್ ಪಿ ಗೌಡ, ಕಸಾಪ ಪದಾಧಿಕಾರಿಗಳಾದ ಜಿ ಡಿ ಮನೋಜೆ, ತಾಲೂಕು ಘಟಕ ಗೌರವ ಕಾರ್ಯದರ್ಶಿ ಬಾಬು ಶೇಖ್, ಜೋಯಿಡಾ ತಾಲ್ಲಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶ್ವಂತ ನಾಯ್ಕ, ಜೋಯಿಡಾ ಕಸಾಪ ಅಧ್ಯಕ್ಷ ಪಾಂಡುರoಗ ಪಟಗಾರ ಇದ್ದರು. ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ಜಿ ಡಿಪಾಲೇಕರ, ಕೆಯುಡಿ ಸಿಂಡಿಕೇಟ್ ಸದಸ್ಯರಾದ ಶಿವಾನಂದ ನಾಯಕ, ಹಿರಿಯರಾದ ಕೆ ಡಿ ಪೆಡ್ನೇಕರ, ದೇವಿದಾಸ ನಾಯ್ಕ ಇತರರು ಹಾಜರಿದ್ದರು.
ಹಿಂದು ಪ್ರೌಢಶಾಲಾ ಶಿಕ್ಷಕಿ ವನಿತಾ ಶೇಟ ಪ್ರಾರ್ಥಿಸಿದರು. ಕಸಾಪ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗಣೇಶ ಬಿಷ್ಠಣ್ಣನವರ್ ನಿರ್ವಹಿಸಿದರು. ಕಸಾಪ ಕೋಶಾಧ್ಯಕ್ಷ ಶಿವಾನಂದ ತಾಂಡೇಲ ವಂದಿಸಿದರು. ಕಸಾಪ ಪದಾಧಿಕಾರಿಗಳಾದ ರಮೇಶ್ ಗುನಗಿ, ಎನ್ ಜಿ ನಾಯ್ಕ, ಜ್ಞಾನೇಶ್ವರ ಗುನಗಿ, ನಾಗೇಂದ್ರ ಅಂಚೇಕರ, ಮಚ್ಚೇಂದ್ರ ಮಹಾಲೆ, ಸೂರಜ ಕುರಮಕರ, ವಿದ್ಯಾನಾಯ್ಕ, ಮಿಲನ ನಾಯ್ಕ, ನಿವೇದಿತಾ ಕೊಳಂಬಕರ, ಖೈರುನ್ನಿಸಾ ಶೇಖ, ದಿವ್ಯಾ ದೇವಿದಾಸ ನಾಯ್ಕ ಸಂಘಟನೆಗೆ ಸಹಕರಿಸಿದರು.
Discussion about this post