ಉತ್ತರ ಕನ್ನಡ ಸಂಸದರಾಗಿ ಆಯ್ಕೆಯಾದ ನಂತರ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ನಿರ್ಧರಿಸಿದ್ದಾರೆ.
ಜುಲೈ 14ರಿಂದ 17ರವರೆಗೆ ಕಾಂಬೋಡಿಯ ದೇಶದಲ್ಲಿ ನಡೆಯಲಿರುವ 16ನೇ ಏಷ್ಯನ್ ಅಂತರ-ಸoಸದೀಯ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಾಂಬೋಡಿಯ ದೇಶದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸಲು ಉತ್ತರ ಕನ್ನಡ ಸಂಸದರನ್ನು ಆಯ್ಕೆ ಮಾಡಿದ್ದಾರೆ.
ಶಾಂತಿ, ಮಹಿಳಾ ಸಶಕ್ತಿಕರಣ, ಹವಾಮಾನ ವೈಪರಿತ್ಯ ಕುರಿತು ಇಲ್ಲಿ ಚರ್ಚೆ ನಡೆಯಲಿದೆ. ಈ ಸಂವಾದದಲ್ಲಿ ಭಾರತ ದೇಶದ ನಿಲುವು, ಯೋಜನೆಗಳ ಕುರಿತು ವಿಷಯ ಮಂಡಿಸಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಯಾರಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ರಾಷ್ಟ್ರದ ಅಭಿವೃದ್ಧಿ ಮತ್ತು ವಿಶ್ವದಲ್ಲಿ ಮೋದಿ ಕೈಗೊಂಡ ಅಭಿವೃದ್ಧಿಯ ಬಗ್ಗೆಯೂ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಷಣ ಮಾಡಲಿದ್ದಾರೆ.
`ಈ ಮಹತ್ವದ ಚರ್ಚೆಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಸಕ್ರಿಯವಾಗಿ ಭಾಗವಹಿಸಲು ನಾನು ಕಾತರನಾಗಿದ್ದೇನೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿಸುವ ಅವಕಾಶ ಸಿಕ್ಕಿದಕ್ಕೆ ಕೃತಜ್ಞತೆ ಸಲ್ಲಿಸುವೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.
Discussion about this post