ಮೇಷ ರಾಶಿ: ನಿಮ್ಮ ಪ್ರಯತ್ನಕ್ಕೆ ಕುಟುಂಬದ ಬೆಂಬಲ ಸಿಗಲಿದೆ. ಹಣವನ್ನು ವ್ಯರ್ಥವಾಗಿ ಖರ್ಚು ಮಾಡದಿದ್ದರೆ ಮಾತ್ರ ಉಳಿತಾಯ ಸಾಧ್ಯ. ಈಗ ಉಳಿತಾಯ ಮಾಡಿದ ಹಣ ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲಿದೆ. ಕುಟುಂಬದವರ ಜೊತೆ ಕಟುವಾಗಿ ವರ್ತಿಸದಿರಿ.
ವೃಷಭ ರಾಶಿ: ಒತ್ತಡವನ್ನು ಕಡಿಮೆಗೊಳಿಸಿಕೊಳ್ಳಲು ಕುಟುಂಬದ ಜೊತೆ ಸಮಯ ಕಳೆಯಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಇರಲಿದೆ.
ಮಿಥುನ ರಾಶಿ: ಅನಿಯಂತ್ರಿತ ಕೋಪದಿಂದ ಮನಸ್ಸಿನ ಶಾಂತಿ ಹಾಳಾಗಲಿದೆ. ಈ ದಿನ ನೀವು ಅನಿರೀಕ್ಷಿತ ಹಣವನ್ನು ಪಡೆಯಲಿದ್ದೀರಿ. ಕುಟುಂಬದ ಜೊತೆ ಪ್ರಯಾಣವನ್ನ ಬಳಸುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ: ಕೆಲಸದ ಒತ್ತಡ ನಿಮ್ಮನ್ನು ಕಾಡಬಹುದು. ಹೊಸ ಹಣಗಳಿಕೆಯ ಅವಕಾಶಗಳು ಬರಲಿದೆ. ಸಹೋದ್ಯೋಗಿಗಳಿಂದ ಪ್ರಶಂಸೆ ಸಿಗಲಿದೆ.
ಸಿಂಹ ರಾಶಿ: ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿದೆ. ಕೋರ್ಟ್ ಸಂಬoಧಿತ ವ್ಯಾಜ್ಯಗಳು ಕೂಡ ಬಗೆಹರಿಯಲಿದೆ. ಆರೋಗ್ಯ ಸ್ಥಿತಿ ಇಂದಿನoತೆ ಇರಲಿದೆ.
ಕನ್ಯಾ ರಾಶಿ: ಆರ್ಥಿಕವಾಗಿ ಲಾಭದಾಯಕವಾಗಿರುವಂತಹ ದಿನ. ಮಾನಸಿಕವಾಗಿ ಸ್ವಲ್ಪ ಒತ್ತಡ ಬರಬಹುದು. ಇದ್ದಕ್ಕಿದ್ದಂತೆ ಪ್ರಯಾಣವೂ ಕೂಡ ನಿಗದಿಯಾಗಬಹುದು. ನೆರೆಹೊರೆಯವರಿಂದ ನಿಮಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಬಹುದು.
ತುಲಾ ರಾಶಿ: ಸುಧೀರ್ಘ ಸಮಯದಿಂದ ಇರುವಂತಹ ಸಮಸ್ಯೆಗಳು ಬಗೆಹರಿಯಲಿದೆ. ಹಣ ಸ್ವಲ್ಪ ಮಟ್ಟಿಗೆ ನಷ್ಟವಾಗಲಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ. ತಾಳ್ಮೆಯಿರಲಿ.
ವೃಶ್ಚಿಕ ರಾಶಿ: ಯಾರಾದರೂ ನಿಮಗೆ ಅಸಮಾಧಾನವುಂಟುಮಾಡಬಹುದು. ಕಿರಿಕಿರಿ ನಿಮ್ಮನ್ನು ಆವರಿಸಲು ಬಿಡಿ. ತಾಳ್ಮೆ ಕಳೆದುಕೊಳ್ಳಬೇಡಿ. ಚರ್ಮದ ಸಮಸ್ಯೆ ಆಗಬಹುದು. ಎಚ್ಚರಿಕೆಯಿಂದಿರಿ.
ಧನು ರಾಶಿ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು. ಇದರಿಂದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಪ್ರವಾಸದಿಂದ ಸಂತೋಷವಾಗುತ್ತದೆ.
ಮಕರ ರಾಶಿ: ರಿಯಲ್ ಎಸ್ಟೆಟ್ ಹೂಡಿಕೆ ಲಾಭದಾಯಕವಾಗಿರಲಿದೆ. ಕೆಲಸದ ಸ್ಥಳದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾತು ಬೇಡ. ಅತಿಯಾದ ಮಾತು ಕೆಟ್ಟ ಪರಿಣಾಮಕ್ಕೆ ಕಾರಣವಾಗಬಹುದು.
ಕುಂಭ ರಾಶಿ: ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿದೆ. ಅರೋಗ್ಯ ಸಮಸ್ಯೆ ಸುಧಾರಿಸಲಿದೆ. ದೇವರ ನಾಮಸ್ಮರಣೆ ಮಾಡಿ.
ಮೀನ ರಾಶಿ: ಬೇರೆಯವರ ಮಾತು ಕೇಳಿ ಪ್ರೀತಿ ಪಾತ್ರರನ್ನು ನೋಯಿಸಬೇಡಿ. ಆಪ್ತರ ಕುರಿತು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಡಿ. ಹೆಚ್ಚಿನ ಕೆಲಸದ ಹೊರೆತಾಗಿಯೂ ಕೆಲಸದ ಸ್ಥಳದಲ್ಲಿ ಪ್ರಶಾಂಸೆ ಪಡೆಯುತ್ತಿರಿ.
Discussion about this post