ಸಂಬoಧಿಕರ ಅಂತ್ಯಕ್ರಿಯೆ ವೇಳೆ ಊದಬತ್ತಿ ಸಿಗದ ಕಾರಣ ಶಿರಸಿಯ ಸುಬ್ರಹ್ಮಣ್ಯ ನಾಯ್ಕ ಹಾಗೂ ರವಿ ನಾಯ್ಕ ಹೊಡೆದಾಡಿಕೊಂಡಿದ್ದಾರೆ.
ಶಿರಸಿ ರಾಮನಬೈಲಿನ ಸುಬ್ರಹ್ಮಣ್ಯ ನಾಯ್ಕ ಅವರು ಸೆಂಟ್ರಿAಗ್ ಕೆಲಸ ಮಾಡಿಕೊಂಡಿದ್ದರು. ಅವರ ದೊಡ್ಡಮ್ಮ ಕಣ್ಣಿಯಮ್ಮ ಅವರು ನಿಧನರಾಗಿದ್ದು, ಸಾಮ್ರಾಟ್ ಹೊಟೇಲ್ ಎದುರಿನ ಸ್ಮಶಾನಕ್ಕೆ ಕಣ್ಣಿಯಮ್ಮ ಅವರ ಶವ ತರಲಾಗಿತ್ತು. ಅಂತ್ಯಕ್ರಿಯೆ ವೇಳೆ ಸುಬ್ರಹ್ಮಣ್ಯ ನಾಯ್ಕ ಅವರ ಭಾವನ ಮಗ ರಾಮನಬೈಲಿನ ರವಿ ನಾಯ್ಕ ಅವರು ಊದಬತ್ತಿ ಹುಡುಕಾಡುತ್ತಿದ್ದರು.
ಆಗ, ರವಿ ನಾಯ್ಕ ಅವರು ಸುಬ್ರಹ್ಮಣ್ಯ ನಾಯ್ಕ ಅವರ ಬಳಿ `ಊದಬತ್ತಿ ಕೊಡು’ ಎಂದರು. ಆದರೆ, ಸುಬ್ರಹ್ಮಣ್ಯ ನಾಯ್ಕ ಅವರು ಊದಬತ್ತಿ ಕೊಡಲು ಒಪ್ಪಲಿಲ್ಲ. `ನಿನಗೆ ಊದಬತ್ತಿ ಬೇಕಾದರೆ ತೆಗೆದುಕೊಂಡು ಬಾ’ ಎಂದು ಸುಬ್ರಹ್ಮಣ್ಯ ನಾಯ್ಕ ಹೇಳಿದರು. ಇದರಿಂದ ರವಿ ನಾಯ್ಕ ಅಲ್ಲಿಯೇ ಸಿಟ್ಟಾದರು.
ಆ ದಿನ ರಾತ್ರಿ ಸುಬ್ರಹ್ಮಣ್ಯ ನಾಯ್ಕ ಅವರು ಮನೆಯಲ್ಲಿದ್ದರು. 10 ಗಂಟೆ ವೇಳೆ ಮನೆ ಬಳಿ ಬಂದ ರವಿ ನಾಯ್ಕ ಅವರು ದೊಡ್ಡದಾಗಿ ಕೂಗಾಡಿದರು. `ಊದಬತ್ತಿ ಕೇಳಿದರೂ ಕೊಡದೇ ಜನರ ಎದುರು ಅವಮಾನ ಮಾಡಿದೆ’ ಎಂದು ಬೊಬ್ಬೆ ಹೊಡೆದರು. ಮನೆಯಿಂದ ಹೊರ ಬಂದ ಸುಬ್ರಹ್ಮಣ್ಯ ನಾಯ್ಕ ಅವರಿಗೆ ಎರಡು ಏಟು ಬಾರಿಸಿದರು.
ಮನೆ ಅಂಗಳದಲ್ಲಿದ್ದ ಕಲ್ಲು ತೆಗೆದು ಸುಬ್ರಹ್ಮಣ್ಯ ನಾಯ್ಕರ ಕಡೆ ಬೀಸಿದರು. ರವಿ ನಾಯ್ಕ ಅವರು ಎಸೆದ ಕಲ್ಲು ಸುಬ್ರಹ್ಮಣ್ಯ ನಾಯ್ಕ ಅವರ ತಲೆಗೆ ತಾಗಿತು. ಗಾಯಗೊಂಡ ಸುಬ್ರಹ್ಮಣ್ಯ ನಾಯ್ಕ ಅವರು ಮರುದಿನ ಶಿರಸಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
Discussion about this post