ಸರ್ಕಾರಿ ಸ್ವತ್ತಾದ ಕಬ್ಬಿಣ ಮಾರಿ ಲಕ್ಷಾಂತರ ರೂ ಕಬಳಿಸಿದ್ದ ಶಿರಸಿ ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ನಗರಸಭೆ ಕಂದಾಯ ಅಧಿಕಾರಿ ಆರ್ ಎಂ ವರ್ಣೇಕರ್ ಲಂಚಕ್ಕೆ ಕೈ ಒಡ್ಡಿ ಸಿಕ್ಕಿಬಿದ್ದಿದ್ದಾರೆ. 3 ಲಕ್ಷ ರೂ ಲಂಚ ಸ್ವೀಕರಿಸಿ ಅವರಿಬ್ಬರಯ ಜೈಲು ಸೇರಿದ್ದಾರೆ.
ಶಿರಸಿ ನಗರದ ವಿಕಾಸಾಶ್ರಮ ಮೈದಾನದ ಸಮೀಪ ರಮೇಶ ಹೆಗಡೆ ಎಂಬಾತರ ಜಾಗವಿದ್ದು, ಜಾಗದ ಕೆಲಸ ಮಾಡಿಕೊಡಲು ನಗರಸಭೆ ಸದಸ್ಯ ಗಣಪತಿ ನಾಯ್ಕ ಲಂಚ ಬೇಡಿದ್ದರು. ಆರ್ ಎಂ ವರ್ಣೇಕರ್ ಸಹ ಅದರಲ್ಲಿ ಪಾಲು ಬಯಸಿದ್ದರು. ಹೀಗಾಗಿ ರಮೇಶ ಹೆಗಡೆ ಅವರು ಲೋಕಾಯುಕ್ತರ ಮೊರೆ ಹೋಗಿದ್ದರು.
ಬುಧವಾರ ಎಪಿಎಂಸಿ ಹತ್ತಿರ ಇರುವ ಜಿಯೋ ಕಚೇರಿ ಬಳಿ ಲಂಚ ಸ್ವೀಕರಿಸುವಾಗ ಈ ಇಬ್ಬರು ಸಿಕ್ಕಿಬಿದ್ದರು. ಲೋಕಾಯುಕ್ತ ಅಧಿಕಾರಿಗಳು ಹಣದ ಜೊತೆ ಆ ಇಬ್ಬರನ್ನು ಬಂಧಿಸಿದರು. ಬಂಧಿತರ ವಿಚಾರಣೆ ನಡೆಯುತ್ತಿದೆ.
ಲೋಕಾಯುಕ್ತ ಎಸ್ಪಿ ಕುಮಾರಚಂದ ಕಾರ್ಯಾಚರಣೆಯ ನೇತ್ರತ್ವವಹಿಸಿದ್ದರು. ಡಿವೈಎಸ್ಪಿ ಧನ್ಯಾ ನಾಯಕ, ಸಿಪಿಐ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಸೇರಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದರು.
Discussion about this post