ಮನೆಯಲ್ಲಿ ಮೊಬೈಲ್ ಸಿಗದ ಕಾರಣ ವಿದ್ಯಾರ್ಥಿಯೊಬ್ಬರು ಸಾವಿಗೆ ಶರಣಾಗಿದ್ದಾರೆ. 13 ವರ್ಷದ ಓಂ ಕದಂ ಮೊಬೈಲ್ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಳಿಯಾಳದ ಮಂಗಳವಾಡದಲ್ಲಿ ಮನೋಹರ್ ಕದಂ ಅವರು ವಾಸವಾಗಿದ್ದರು. ಅವರ ಮಗ ಓಂ ಕದಂ 7ನೇ ತರಗತಿಯಲ್ಲಿ ಓದುತ್ತಿದ್ದರು. ವಿಪರೀತ ಮೊಬೈಲ್ ನೋಡುತ್ತಿದ್ದ ಕಾರಣ ಓಂ ಕದಂ ಅವರಿಗೆ ಮನೆಂiÀiಲ್ಲಿ ಮೊಬೈಲ್ ನೋಡಲು ನಿಷೇಧ ಹೇರಲಾಗಿತ್ತು. ಅದಾಗಿಯೂ ಓಂ ಕದಂ ಆಗಾಗ ಮೊಬೈಲ್ ನೋಡುತ್ತಿದ್ದರು. ಮೊಬೈಲ್ ನೋಡಬೇಡ ಎಂದು ಕುಟುಂಬದವರು ಬುದ್ದಿ ಹೇಳಿದ್ದರು.
ಜುಲೈ 15ರ ಸಂಜೆ ಸಹ ಓಂ ಕದಂ ಮೊಬೈಲ್ ನೋಡುವಾಗ ಸಿಕ್ಕಿಬಿದ್ದರು. ಮೊಬೈಲ್ ನೋಡುತ್ತಿದ್ದ ಕಾರಣ ಮನೋಹರ್ ಕದಂ ಅವರು ಬೈದರು. ಓಂ ಕದಂ ಬಳಿಯಿದ್ದ ಮೊಬೈಲನ್ನು ಕಸಿದುಕೊಂಡರು. ಮೊಬೈಲ್ ಸಿಗದ ಕಾರಣ ಬೇಸರಗೊಂಡ ಓಂ ಕದಂ ಆತ್ಮಹತ್ಯೆಯ ನಿರ್ಧಾರ ಮಾಡಿದರು.
ಸಂಜೆ 5.30ರ ಆಸುಪಾಸಿಗೆ ಮನೆ ಮಹಡಿ ಮೇಲೆ ಹೋಗಿದ್ದ ಓಂ ಕದಂ ಅಲ್ಲಿಯೇ ಇದ್ದ ಪ್ಲಾಸ್ಟಿಕ್ ಹಗ್ಗದಿಂದ ಮನೆ ಮಾಳಿಗೆಗೆ ನೇಣು ಬಿಗಿದುಕೊಂಡರು. ಕುಟುಂಬದವರು ಬಂದು ನೋಡುವಷ್ಟರಲ್ಲಿ ಓಂ ಹೆಗಡೆ ಸಾವನಪ್ಪಿದ್ದರು.
Discussion about this post