ಮೇಷ ರಾಶಿ: ಪೋಷಕರ ಸಹಾಯದಿಂದ ಹಣಕಾಸು ಸಮಸ್ಯೆ ದೂರವಾಗಲಿದೆ. ಮಕ್ಕಳು ಸಹ ಕಾಳಜಿವಹಿಸುತ್ತಾರೆ. ದೇವನಾಮ ಸ್ಮರಣೆಯಿಂದ ನೆಮ್ಮದಿ ಸಾಧ್ಯ.
ವೃಷಭ ರಾಶಿ: ನಿಮ್ಮ ಸಂಗಾತಿಯ ಪ್ರೀತಿ ಭಾವಪೂರ್ಣ ಎಂಬ ಅರಿವಾಗಲಿದೆ. ನಿಮ್ಮ ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ.
ಮಿಥುನ ರಾಶಿ: ನಿಮ್ಮ ತೂಕ ನಿಯಂತ್ರಿಸುವುದು ಉತ್ತಮ. ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಮಾಡಿ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತವಾಗುತ್ತದೆ.
ಕರ್ಕ ರಾಶಿ: ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ. ಮಕ್ಕಳ ಆರೋಗ್ಯದ ಬಗ್ಗೆಯೂ ಗಮನವಿರಲಿ. ಆರೋಗ್ಯದ ವಿಷಯದಲ್ಲಿ ಹಣವೆಚ್ಚವಾಗುವ ಸಾಧ್ಯತೆಯಿದೆ.
ಸಿಂಹ ರಾಶಿ: ಈ ದಿನ ಉತ್ತಮ ವಿಚಾರಗಳು ತುಂಬಲಿದೆ. ನೀವು ಮಾಡುವ ಚಟುವಟಿಕೆಗಳು ನಿರೀಕ್ಷೆಗೂ ಮೀರಿ ಆದಾಯ ಕೊಡಲಿದೆ.
ಕನ್ಯಾ ರಾಶಿ: ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ. ಇದರಿಂದ ಅನಿರೀಕ್ಷಿತ ಪ್ರತಿಫಲಗಳು ಸಿಗುತ್ತದೆ.
ತುಲಾ ರಾಶಿ: ಹೊಸ ಯೋಜನೆಗಳು ಮತ್ತು ವಿಚಾರ ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡರೆ ಉತ್ತಮ. ಜೀವನ ಸಂಗಾತಿಯ ಜೊತೆ ಕಾಲ ಕಳೆಯಿರಿ.
ವೃಶ್ಚಿಕ ರಾಶಿ: ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜೊತೆ ಸಮಯ ಕಳೆಯುತ್ತದೆ. ನೈಸರ್ಗಿಕ ಸೌಂದರ್ಯದಿAದ ವಿಸ್ಮಯವಾಗುವ ಸಾಧ್ಯತೆಯಿದೆ.
ಧನು ರಾಶಿ : ಔಷಧ ಪಡೆಯುವ ಮುನ್ನ ವೈದ್ಯರ ಸಲಹೆಪಡೆಯಿರಿ. ಇಲ್ಲವಾದಲ್ಲಿ ಔಷಧ ಅವಲಂಬನೆ ಸಾಧ್ಯತೆ ಅಧಿಕವಾಗಲಿದೆ. ಗಣನೀಯ ಪ್ರಮಾಣದಲ್ಲಿ ಹಣ ಬರಲಿದೆ. ಮನಸ್ಸಿಗೆ ಶಾಂತಿ ಸಿಗಲಿದೆ.
ಮಕರ ರಾಶಿ: ಆಪ್ತರ ಬೆಂಬಲದಿAದ ನಿಮ್ಮ ವ್ಯಾಪಾರ ಉತ್ತಮವಾಗಲಿದೆ. ಆರ್ಥಿಕ ಲಾಭ ಆಗಲಿದೆ. ಪ್ರೀತಿ ಪಾತ್ರರ ಜೊತೆ ಜಗಳವಾಡಬೇಡಿ. ವಾಗ್ವಾದ-ವಿವಾದಗಳಿಂದ ದೂರವಿರುವುದು ಉತ್ತಮ.
ಕುಂಭ ರಾಶಿ: ವೈಯಕ್ತಿ ಬೆಳವಣಿಗೆಯಿಂದ ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಸಾಧನೆಯ ಹಾದಿ ಸುರಳಿತವಾಗಲಿದೆ. ಪ್ರೀತಿಪಾತ್ರರ ನಗುವಿನಿಂದ ದಿನ ಶುರುವಾಗಿ ಪರಸ್ಪರ ಕನಸುಗಳೊಂದಿಗೆ ದಿನ ಮುಗಿಯಲಿದೆ.
ಮೀನ ರಾಶಿ: ಕೆಲಸದಲ್ಲಿನ ಬೆಂಬಲ ಆತ್ಮ ವಿಶ್ವಾಸ ಹೆಚ್ಚಿಸಲಿದೆ. ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಅಗತ್ಯವಿಲ್ಲದ ವಿಷಯದ ಮೇಲೆ ಸಮಯ ವೈರ್ಥ ಮಾಡಬೇಡಿ.
Discussion about this post