ಮೇಷ ರಾಶಿ : ಅನಗತ್ಯವಾಗಿ ಹಣ ಖರ್ಚು ಮಾಡುವುದನ್ನು ಬಿಡಿ. ಇಲ್ಲವಾದಲ್ಲಿ ಅನಿವಾರ್ಯ ಇದ್ದಾಗ ಹಣದ ಕೊರತೆ ಆಗಬಹುದು.
ವೃಷಭ ರಾಶಿ: ಉದ್ಯಮಶೀಲ ಜನರ ಸಹಭಾಗಿತ್ವದಲ್ಲಿ ಉದ್ಯಮಗಳನ್ನು ಪ್ರಾರಂಭಿಸಿ. ಸಮಸ್ಯೆಗಳಿಗೆ ಬೇಗ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ.
ಮಿಥುನ ರಾಶಿ: ಅಧ್ಯಯನ ವಿಷಯದಲ್ಲಿ
ಹಿನ್ನಡೆ ಆಗಲಿದೆ. ಮನಸ್ಸು ಏಕಾಗೃತೆಯಿಂದಿರುವುದಿಲ್ಲ. ಸ್ನೇಹಿತರ ಜೊತೆ ಹರಟೆಯಲ್ಲಿ ಸಮಯ ಹಾಳಾಗುವ ಸಾಧ್ಯತೆಯಿದೆ.
ಕರ್ಕ ರಾಶಿ: ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಪ್ರೀತಿ ತೋರಬೇಕು. ಸಂದರ್ಶನಕ್ಕೆ ಹಾಜರಾಗಲು ಉತ್ತಮ ದಿನ. ಉದ್ಯೋಗಕ್ಕಾಗಿ ರೆಸ್ಯುಮ್ ಕಳುಹಿಸುವವರಿಗೂ ಉತ್ತಮ ದಿನ.
ಸಿಂಹ ರಾಶಿ: ಮನೆಯ ಕರ್ತವ್ಯಗಳನ್ನು ನೀವು ನಿರ್ಲಕ್ಷಿಸಿದ್ದಲ್ಲಿ ನಿಮ್ಮ ಜೊತೆಗಿರುವವರಿಗೆ ಸಿಟ್ಟಾಗಬಹುದು. ಪ್ರಣಯದ ಸಂಬಂಧ ಅತ್ಯಾಕರ್ಷಕವಾಗಿದ್ದರೂ ಅದು ಬಹುಕಾಲ ಬಾಳುವುದಿಲ್ಲ. ಜನರು ನಿಮ್ಮ ಕೆಲಸದಲ್ಲಿನ ಪ್ರಯತ್ನಗಳಿಗೆ ನಿಮ್ಮನ್ನು ಗುರುತಿಸುತ್ತಾರೆ.
ಕನ್ಯಾ ರಾಶಿ: ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ. ಇಲ್ಲಿಯವರೆಗೆ ಅನಗತ್ಯವಾಗಿ ಹಣ ಖರ್ಚು ಮಾಡುತ್ತಿದ್ದವರಿಗೆ ಹಣದ ಮೌಲ್ಯ ಅರಿವಾಗಲಿದೆ.
ತುಲಾ ರಾಶಿ: ಹಣಕಾಸಿನ ಉಳಿತಾಯ ಬಯಕೆ ಈಡೇರಲಿದೆ. ಮನೆ ಕೆಲಸಗಳಲ್ಲಿ ಮಕ್ಕಳ ಸಹಾಯ ಸಿಗಲಿದೆ. ಸೂಕ್ತ ಯೋಜನೆ ರೂಪಿಸಲು ಸಕಾಲ
ವೃಶ್ಚಿಕ ರಾಶಿ: ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಗಂಭೀರ ಪ್ರಯತ್ನ ಮಾಡಿ. ಆಪ್ತರು ಅಥವಾ ಸಂಬಂಧಿಕರ ಜೊತೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಯೋಜಿಸಿ ನಿರ್ಧಾರ ತೆಗೆದುಕೊಳ್ಳಿ. ಪ್ರತಿ ಹಂತದಲ್ಲಿಯೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಧನು ರಾಶಿ: ದೀರ್ಘಕಾಲದ ನಂತರ ನಿಮ್ಮ ಸ್ನೇಹಿತರನ್ನು ಸಂಧಿಸುವ ವಿಚಾರ ಬರಲಿದೆ. ನಿಮ್ಮ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ತ್ರಾಣ ಮತ್ತು ಜ್ಞಾನ ಪಡೆಯುತ್ತೀರಿ.
ಮಕರ ರಾಶಿ: ಮಾನಸಿಕವಾಗಿ ಸ್ಪಷ್ಟವಾಗಿರಿ. ಗೊಂದಲ ಹಾಗೂ ಹತಾಶೆಯ ಮನೋಭಾವನೆ ಬೇಡ. ಆರ್ಥಿಕ ಅಭಿವೃದ್ಧಿ ಸಾಧ್ಯ.
ಕುಂಭ ರಾಶಿ: ಸಾಲ ಕೇಳುವವರ ಸಂಖ್ಯೆ ಹೆಚ್ಚಾಗಲಿದೆ. ನಂಬಿಗಸ್ತರಿಗೆ ಮಾತ್ರ ಸಾಲ ಕೊಡಿ. ಅಯೋಗ್ಯರಿಗೆ ಹಣ ಕೊಟ್ಟರೆ ನಷ್ಟವಾಗಲಿದೆ.
ಮೀನ ರಾಶಿ: ವಿಪರೀತ ಖರ್ಚು ಮಾಡಬೇಡಿ. ಹಣಕಾಸಿನ ಅಗತ್ಯದ ಬಗ್ಗೆ ಈ ದಿನ ಅರಿವಾಗಲಿದೆ.
Discussion about this post