ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಜೀವ ಭಯ ಎದುರಾಗಿದೆ. ಫೋನಿಗೆ ಸಿಗದ ಅನಂತಕುಮಾರ ಹೆಗಡೆ ಅವರಿಗೆ ತಲೆಕೆಟ್ಟ ತಿರುಕನೊಬ್ಬ ಇ-ಮೇಲ್ ಮೂಲಕ ಬೆದರಿಕೆ ಒಡ್ಡಿದ್ದಾನೆ!
ಅನಂತಕುಮಾರ ಹೆಗಡೆ ಅವರಿಗೆ ಜೀವ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಅವರು ಅಧಿಕಾರದಲ್ಲಿರುವಾಗ ಸಹ ಸಾಕಷ್ಟು ಸಲ ಇಂಥ ಬೆದರಿಕೆ ಎದುರಿಸಿದ್ದರು. ಕೆಲವೊಮ್ಮೆ ಆ ಬಗ್ಗೆ ದೂರು ನೀಡಿದ್ದರು. ಅನೇಕ ಬಾರಿ ಅಂಥವುಗಳನ್ನು ನಿರ್ಲಕ್ಷಿಸಿದ್ದರು. ಆದರೆ, ಅಧಿಕಾರದಿಂದ ಇಳಿದ ನಂತರ ಅವರಿಗೆ ಆ ಪ್ರಮಾಣದಲ್ಲಿ ಜೀವ ಬೆದರಿಕೆ ಬಂದಿರಲಿಲ್ಲ.
ಅನAತಕುಮಾರ ಹೆಗಡೆ ಅವರಿಗೆ ಅನೇಕ ವರ್ಷಗಳಿಂದ ಶ್ರೀಧರ ತೆಗ್ಗಿನ್ ಅವರು ಗನ್ ಮ್ಯಾನ್ ಆಗಿದ್ದರು. ಹೊಡೆದಾಟ ಪ್ರಕರಣವೊಂದರಲ್ಲಿ ಅವರು ಜೈಲು ಸೇರಿದ್ದರಿಂದ ಶ್ರೀಧರ್ ತೆಗ್ಗಿನ್ ಅವರನ್ನು ಅಮಾನತು ಮಾಡಲಾಗಿತ್ತು. ಅದಾದ ನಂತರ ಶಸಸ್ತç ಮೀಸಲುಪಡೆಯ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನು ಗನ್‌ಮ್ಯಾನ್ ಆಗಿ ನೇಮಿಸಲಾಗಿದೆ. ಅದಾಗಿಯೂ ಅವರಿಗೆ ಇದೀಗ ಜೀವ ಬೆದರಿಕೆ ಬಂದಿದೆ.
ಅನoತಕುಮಾರ ಹೆಗಡೆ ಅವರಿಗೆ ಜೀವ ಬೆದರಿಕೆ ಬಂದಿರುವ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಪೊಲೀಸ್ ದೂರು ನೀಡಿದ್ದಾರೆ. ಜೂನ್ 24ರ ಅವಧಿಯಲ್ಲಿ ಜೀವ ಬೆದರಿಕೆ ಬಂದ ಬಗ್ಗೆ ಅವರು ಹೇಳಿದ್ದಾರೆ. ಅನಂತಕುಮಾರ ಹೆಗಡೆ ಅವರ ಗನ್ ಮ್ಯಾನ್ ಶ್ರೀಧರ್ ತಗ್ಗಿನ್ ಅವರು ಅಮಾನತು ಆಗಿದ್ದು ಸಹ ಜೂನ್ 24ಕ್ಕೆ. ಗನ್ ಮ್ಯಾನ್ ಬದಲಾವಣೆ ದಿನವೇ ಅವರಿಗೆ ಈ ಬೆದರಿಕೆ ಬಂದಿದೆ.
ಭಟ್ಕಳ ಸ್ಪೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಒಡ್ಡಿದವರನ್ನು 24 ತಾಸಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಾಜಿ ಸಂಸದರಿಗೆ ಇ-ಮೇಲ್ ಮೂಲಕ ಬೆದರಿಕೆ ಒಡ್ಡಿದವರನ್ನು ಸಹ ಇದೇ ರೀತಿ ಬಂಧಿಸುತ್ತಾರೆ ಎಂಬುದು ಸಾರ್ವಜನಿಕರ ನಂಬಿಕೆ.
Discussion about this post