ಶಿರಸಿಯಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಕಾರವಾರದಲ್ಲಿ ಕನ್ನಡ ಪ್ರಭದ ಅರೆಕಾಲಿಕ ವರದಿಗಾರರಾಗಿದ್ದ ದೀರ್ಘ ಕಾಲದ ಸೇವೆ ಸಲ್ಲಿಸಿದ್ದ ಗುರು ಹೆಗಡೆ ನಡುವೆ ಪ್ರಜಾವಾಣಿಯಲ್ಲಿ ಸಹ ಅರೆಕಾಲಿಕ ಪ್ರತಿನಿಧಿಯಾಗಿದ್ದರು. ಅವರ ಪತ್ರಿಕಾ ರಂಗದ ಸೇವೆ ಇದೀಗ ನೆನಪು ಮಾತ್ರ. ಕಾರಣ ಗುರು ಹೆಗಡೆ ಇನ್ನಿಲ್ಲ.
ಶಿರಸಿಯಲ್ಲಿ ಕೆ ಆರ್ ಪ್ರಕಾಶ ಅವರು ಸಂಯುಕ್ತ ಕರ್ನಾಟಕ ಪ್ರತಿನಿಧಿಯಾಗಿದ್ದಾಗ ಗುರು ಹೆಗಡೆ ಅವರ ಸಹಾಯಕರಾಗಿದ್ದರು. ಕೆ ಆರ್ ಪ್ರಕಾಶ ಗರಡಿಯಲ್ಲಿ ಪಳಗಿದ ಅವರು ನಂತರ ಶಿರಸಿಯಿಂದ ಕಾರವಾರಕ್ಕೆ ತೆರಳಿದರು. ಅಲ್ಲಿ ಪ್ರಜಾವಾಣಿ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಅದಾದ ನಂತರ ಕನ್ನಡ ಪ್ರಭ ಪತ್ರಿಕೆಯ ಸಹಾಯಕ ವರದಿಗಾರರಾಗಿ ಕೆಲಸ ಮಾಡಿದರು.
ಕಳೆದ ಎರಡು ವರ್ಷದ ಹಿಂದೆ ಗುರು ಹೆಗಡೆ ಅವರಿಗೆ ಅನಾರೋಗ್ಯ ಕಾಡಿತು. ವೈದ್ಯಕೀಯ ವರದಿಯಲ್ಲಿ ಕಾನ್ಸರ್ ಕಾಣಿಸಿತು. ಅದಕ್ಕೆ ಚಿಕಿತ್ಸೆಪಡೆದ ಗುರು ಹೆಗಡೆ ಮತ್ತೆ ಮಾಧ್ಯಮ ಲೋಕದ ಕೆಲಸ ಮುಂದುವರೆಸಿದರು. ಮತ್ತೆ ಒಂದು ವರ್ಷಗಳ ಕಾಲ ನಿರಂತರ ವರದಿಗಳನ್ನು ಪ್ರಸಾರ ಮಾಡಿದರು.
ಅದಾದ ನಂತರ ಮತ್ತೆ ಅನಾರೋಗ್ಯ ಕಾಣಿಸಿದ್ದು, ಎರಡನೇ ಬಾರಿ ಅವರಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಶುಕ್ರವಾರ ಅವರು ತಮ್ಮ ಕೊನೆ ಉಸಿರೆಳೆದರು. ಗುರು ಹೆಗಡೆ ಅವರನ್ನು ಪತ್ರಿಕೋದ್ಯಮದ ಆರಂಭದ ದಿನದಲ್ಲಿ ಕೈಹಿಡಿದು ನಡೆಸಿದ್ದ ಕೆ ಆರ್ ಪ್ರಕಾಶ ಅವರು ಇದೇ ರೋಗದಿಂದ ಸಾವನಪ್ಪಿದ್ದು, ಗುರು ಹೆಗಡೆ ಅವರು ಇದೀಗ ಗುರುವಿನ ದಾರಿಯಲ್ಲಿಯೇ ನಡೆದಿದ್ದಾರೆ.
Discussion about this post