ಮೇಷ ರಾಶಿ: ಭವಿಷ್ಯದ ಬಗ್ಗೆ ಯೋಜನೆ ಮಾಡಿ, ನಿರ್ಧರಿಸಲಾಗದೇ ಸಿಲುಕಿಕೊಂಡಿರುವ ಲಕ್ಷಣಗಳಿವೆ. ಇತರರ ಮಾರ್ಗದರ್ಶನ ನಿಮಗೆ ನೆರವಾಗಲಿದೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿರಲಿ. ಮನೆಯಲ್ಲಿ ಆತಂಕದ ಕ್ಷಣಗಳು ಎದುರಾಗಲಿದೆ.
ವೃಷಭ ರಾಶಿ: ತಂತ್ರಜ್ಞಾನ ಹಾಗೂ ಕೌಶಲ್ಯ ಕಲಿಯುವ ಅಲ್ಪಾವಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ನೇಹಿತರ ಜೊತೆ ಅನಗತ್ಯವಾಗಿ ಹೆಚ್ಚು ಸಮಯ ಕಳೆಯುವುದು ಬಿಕ್ಕಟ್ಟು ತರಲಿದೆ.
ಮಿಥುನ ರಾಶಿ: ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯವಾದರೂ ಅಧ್ಯಯನ ವಿಷಯದಲ್ಲಿ ಆಸಕ್ತಿ ಕಡಿಮೆ ಮಾಡಬೇಡಿ. ಕ್ರೀಡೆ ಜೊತೆ ಓದಿನ ಕಡೆಯೂ ಹೆಚ್ಚಿನ ಗಮನವಿರಲಿ.
ಕರ್ಕ ರಾಶಿ: ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಆಪ್ತ ಸ್ನೇಹಿತರು ಆಕ್ರಮಣಕಾರಿಯಾದರೆ ಅಪಾಯ ಖಚಿತ. ನಿಮ್ಮ ಜೀವನ ಶೈಲಿ ಕಠಿಣವಾಗುವ ಸಾಧ್ಯತೆ ಹೆಚ್ಚಿದೆ.
ಸಿಂಹ ರಾಶಿ: ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ಬರಲಿದೆ. ಮನಸ್ಸಿನ ಶಾಂತಿಗೆ ಭಂಗ ಬರಲಿದೆ. ಪತ್ರದ ಮೂಲಕ ಸಂತೋಷದ ಸುದ್ದಿ ಬರಲಿದೆ. ಕೆಲಸದ ಒತ್ತಡ ಹೆಚ್ಚಿದ ಹಾಗೇ ಮಾನಸಿಕ ಒತ್ತಡ ಹೆಚ್ಚಾಗಲಿದೆ.
ಕನ್ಯಾ ರಾಶಿ: ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸುತ್ತದೆ. ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುತ್ತದೆ. ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ.
ತುಲಾ ರಾಶಿ: ಸಕಾರಾತ್ಮಕ ದೃಷ್ಠಿಕೋನದಿಂದ ಸುತ್ತಲಿನವರನ್ನು ಆಕರ್ಷಿಸಲು ಸಾಧ್ಯ. ಹಣಕಾಸಿನ ತುರ್ತು ಎದುರಾಗುತ್ತದೆ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿ ಆಗಲಿದೆ.
ವೃಶ್ಚಿಕ ರಾಶಿ: ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಸ್ನೇಹಿತರ ಸಹಾಯದಿಂದ ಹಣಕಾಸಿನ ಸಮಸ್ಯೆ ದೂರವಾಗಲಿದೆ.
ಧನು ರಾಶಿ: ಸಾಲ ಕೇಳುವ ಹಾಗೂ ಅದನ್ನು ಹಿಂತಿರುಗಿಸದಿರುವ ಸ್ನೇಹಿತರಿಂದ ದೂರವಿರುವುದು ಉತ್ತಮ. ನಿಮ್ಮ ಅಧೀನದಲ್ಲಿ ಕೆಲಸ ಮಾಡುವವರು ಹೆಚ್ಚಿನ ಉಪಕಾರ ಮಾಡುತ್ತಾರೆ. ರಾತ್ರಿ ವೇಳೆ ಮನೆಯಿಂದ ಹೊರಗೆ ಸಂಚರಿಸದಿರುವುದು ಉತ್ತಮ. ನಿಧಾನವಾಗಿ ವಾಹನ ಓಡಿಸಿ. ಅನಾರೋಗ್ಯ ಕಾಡಬಹುದು, ಎಚ್ಚರವಿರಲಿ.
ಮಕರ ರಾಶಿ: ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರುತ್ತವೆ. ಇತರರ ಸಲಹೆಗಳನ್ನು ಕೇಳುವುದು ಹಾಗೂ ಕಾರ್ಯಗತಗೊಳಿಸಲು ಉತ್ತಮ ದಿನ. ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಚಿಂತನೆ ಮಾಡಿ.
ಕುಂಭ ರಾಶಿ: ಅನಾರೋಗ್ಯ ತಪ್ಪಿಸಲು ವ್ಯಾಯಾಮ ಮಾಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಮನೆ ಕಾರ್ಯಕ್ರಮಗಳಿಗೆ ಹಣ ಖರ್ಚಾಗುತ್ತದೆ. ಇದರಿಂದ ಆರ್ಥಿಕ ಪರಿಸ್ಥಿತಿ ಹಾಳಾಗಬಹುದು.
ಮೀನ ರಾಶಿ: ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಯಿದೆ. ಖಿನ್ನತೆಯಿಂದ ಹೊರ ಬನ್ನಿ. ಹಣದ ಆಗಮನದಿಂದ ಆರ್ಥಿಕ ಸಮಸ್ಯೆ ದೂರವಾಗಲಿದೆ. ಶಾಂತಿಯುತ ಜೀವನಕ್ಕೆ ಸಮಸ್ಯೆ ಇಲ್ಲ.
Discussion about this post