ಮನೆ ಮುಂದಿದ್ದ ಜೋಕಾಲಿ ಆಡುತ್ತಿದ್ದ 12 ವರ್ಷದ ಮಗುವಿನ ಸಾವಿಗೆ ಅದೇ ಜೋಕಾಲಿ ಕಾರಣವಾಗಿದೆ. ಭಟ್ಕಳದ ಪ್ರಣಿತಾ ನಾಯ್ಕ ಅವರ ಕುತ್ತಿಗೆಗೆ ಜೋಕಾಲಿ ಗಂಟು ಬಿದ್ದಿದ್ದರಿಂದ ಸಾವನಪ್ಪಿದ್ದಾರೆ.
ಮುರುಡೇಶ್ವರ ಬಳಿಯ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ಜಗನ್ನಾಥ ನಾಯ್ಕ ಅವರು ವಾಸವಾಗಿದ್ದರು. ಅವರ ಪುತ್ರಿ ಪ್ರಣಿತಾ ನಾಯ್ಕ ಅವರು 7 ನೇ ತರಗತಿಯಲ್ಲಿ ಓದುತ್ತಿದ್ದರು. ಮಳೆ ಕಾರಣ ಗುರುವಾರ ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲಿಯೇ ಅವರು ಆಡವಾಡುತ್ತಿದ್ದರು.
ADVERTISEMENT
ಈ ನಡುವೆ ಸಹೋದರಿಯ ವೇಲ್‌ಪಡೆದು ಮನೆ ಮುಂದೆ ಜೋಕಾಲಿ ನಿರ್ಮಿಸಿಕೊಂಡಿದ್ದರು. ಆ ಜೋಕಾಲಿಯಲ್ಲಿ ಆಡುತ್ತಿರುವಾಗ ಅದರ ಹಗ್ಗವೇ ಕುತ್ತಿಗೆಯನ್ನು ಸುತ್ತಿಕೊಂಡಿತು. ಅದರಿಂದ ತಪ್ಪಿಸಿಕೊಳ್ಳಲು ಪ್ರಣಿತಾ ನಾಯ್ಕ ಅವರಿಂದ ಸಾಧ್ಯವಾಗಲಿಲ್ಲ.
ಪ್ರಣಿತಾ ಅವರ ಕುತ್ತಿಗೆಗೆ ಜೋಕಾಲಿ ಸುತ್ತಿಬಿದ್ದಾಗ ಕೂಗಲು ಅವರಿಂದ ಆಗಲಿಲ್ಲ. ತಾಯಿ ಸಹ ಕೆಲಸಕ್ಕೆ ಹೋಗಿದ್ದರು. ಹೀಗಾಗಿ ಅವರು ಅಲ್ಲಿಯೇ ತಮ್ಮ ಪ್ರಾಣ ಬಿಟ್ಟರು.
Discussion about this post