ಹಳಿಯಾಳದ ಯಲ್ಲಮ್ಮ ಬಾರಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮದ್ಯದ ನಶೆಯಲ್ಲಿದ್ದ ಸಮಿವುಲ್ಲಾ ಬೇಪಾರಿ ಎಂಬಾತರು ಮಹಮದ್ ಸಾಧೀಕ್ ಎಂಬಾತರಿಗೆ ಚಾಕು ಚುಚ್ಚಿದ್ದಾರೆ.
ಹಳಿಯಾಳದ ಕಸಬಾಗಲ್ಲಿಲ್ಲಿ ಪಾಸ್ಟಪುಡ್ ಅಂಗಡಿ ನಡೆಸುವ ಯುನುಸ್ ಅಹ್ಮದ್ ಅವರು ಜುಲೈ 17ರ ಸಂಜೆ ಹಳಿಯಾಳದ ರಾಮದೇವಗಲ್ಲಿಯಲ್ಲಿರುವ ಯಲ್ಲಮ್ಮ ಬಾರ್‌ಗೆ ಹೋಗಿದ್ದರು. ತಮ್ಮೊಂದಿಗೆ ಪಿಶ್ ಮಾರ್ಕೇಟ್ ಬಳಿಯ ಸ್ಲಂ ಏರಿಯಾದ ಮಹಮದ್ ಸಾಧೀಕ್ ಅವರನ್ನು ಕರೆದೊಯ್ದಿದ್ದರು.
ಆ ಬಾರಿನಲ್ಲಿ ಚೌಹಾಣ ಪ್ಲಾಟಿನಲ್ಲಿದ್ದು ಪೆಂಟಿoಗ್ ಕೆಲಸ ಮಾಡುವ ಸಮಿವುಲ್ಲಾ ಬೇಪಾರಿ ಸಹ ಬಂದಿದ್ದರು. ಅವರ ಜೊತೆ ಸ್ನೆಹಿತರಾದ ಪ್ರತೀಕ ಕಠಾರಿ, ದವಾ ಪೆಂಟರ್ ಸಹ ಇದ್ದರು. ಈ ಎಲ್ಲರೂ ಸೇರಿ ಕಂಠಪೂರ್ತಿ ಕುಡಿದಿದ್ದು, ಈ ನಡುವೆ ಸಮಿವುಲ್ಲಾ ಬೇಪಾರಿ ಎಂಬಾತರು ಮಹಮದ್ ಸಾಧೀಕ್ ಮದ್ಯೆ ಜಗಳ ಶುರುವಾಯಿತು.
ಕಿಸೆಯಲ್ಲಿದ್ದ ಚಾಕು ತೆಗೆದ ಸಮಿವುಲ್ಲಾ ಅವರು ಮಹಮದ್ ಸಾಧೀಕ್ ಕುತ್ತಿಗೆಗೆ ಚಾಕು ಚುಚ್ಚಿ ಗಾಯ ಮಾಡಿದರು. ಅದಾದ ನಂತರ ಕಿವಿಗೆ ಸಹ ಚಾಕು ಚುಚ್ಚಿದರು. ಪರಿಣಾಮ ಮಹಮದ್ ಸಾಧೀಕ್ ಭಾರೀ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆ ಸೇರಿದರು. ಪತ್ನಿ ತಮ್ಮನಿಗೆ ಚಾಕು ಚುಚ್ಚಿರುವದನ್ನು ನೋಡಿದ ಯುನುಸ್ ಅಹ್ಮದ್ ಹಳಿಯಾಳ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
Discussion about this post