ವಿಪರೀತ ಸರಾಯಿ ಕುಡಿಯುತ್ತಿದ್ದ ಗಣೇಶ ಮರಾಠಿ ಏಕಾಏಕಿ ದುಶ್ಚಟಗಳನ್ನು ಬಿಟ್ಟು ಸಾವನಪ್ಪಿದ್ದಾರೆ. ರಾತ್ರಿ ಊಟ ಮಾಡಿದ ನಂತರ ವಾಂತಿ ಮಾಡಿದ ಅವರು ಬೆಳಗಾಗುವದರೊಳಗೆ ಸಜೀವವಾಗಿರಲಿಲ್ಲ.
ಹೊನ್ನಾವರದ ಮಾಗೋಡಿನಲ್ಲಿ ಗಣೇಶ ಮರಾಠಿ (53) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ನಿತ್ಯದ ದುಡಿಮೆ ಹಣವನ್ನು ಮದ್ಯ ವ್ಯಸನಕ್ಕೆ ಬಳಸುತ್ತಿದ್ದರು. ಕಳೆದ 3 ತಿಂಗಳಿನಿoದ ಅವರು ಮದ್ಯ ವ್ಯಸನ ಬಿಟ್ಟಿದ್ದರು.
ADVERTISEMENT
ಜುಲೈ 14ರಂದು ಊಟ ಮಾಡಿದ ನಂತರ ಗಣೇಶ ಮರಾಠಿ ಅವರು ವಾಂತಿ ಮಾಡಿದರು. ಅದಾದ ನಂತರ ಅವರೇ ಸುಧಾರಿಸಿಕೊಂಡು ಮನೆಯಲ್ಲಿ ಮಲಗಿದರು. ಮರುದಿನ ಬೆಳಗ್ಗೆ ನೋಡಿದಾಗ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಕುಟುಂಬದವರು ಗಣೇಶ ಮರಾಠಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಆ ವೇಳೆ ವೈದ್ಯರು ಗಣೇಶ ಮರಾಠಿ ಸಾವನಪ್ಪಿದ ವಿಷಯ ತಿಳಿಸಿದರು. ಅವರ ಸಾವಿಗೆ ನೈಜ ಕಾರಣ ಗೊತ್ತಾಗಲಿಲ್ಲ. ಕುಟುಂಬದವರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ADVERTISEMENT
Discussion about this post