ಡಕೋಟಾ ಎಕ್ಸಪ್ರೆಸ್ ಬಸ್ಸಿನ ಸ್ಟೇರಿಂಗ್ ತುಂಡಾಗಿದ್ದರಿoದ ಬಸ್ಸಿನ ಒಳಗಿದ್ದವರ ಜೊತೆ ಹೊರಗೆ ತಿರುಗಾಡುತ್ತಿದ್ದ ಜನರು ಅಪಾಯಕ್ಕೆ ಸಿಲುಕಿದ್ದರು. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಅವರೆಲ್ಲರೂ ಪ್ರಾಣ ಉಳಿಸಿಕೊಂಡರು.
ಶುಕ್ರವಾರ ರಾತ್ರಿ ಅಂಕೋಲಾದಿoದ ಗೋಕರ್ಣಕ್ಕೆ ಹೊರಟಿದ್ದ ಬಸ್ಸು ಮೇಲಿನಕೇರಿಯವರೆಗೆ ಸರಿಯಾಗಿ ಸಾಗಿತು. ಮುಂದೆ ಒಮ್ಮೆಲೆ ಎಡಭಾಗಕ್ಕೆ ಚಲಿಸಲು ಶುರುವಾಯಿತು. ಬಸ್ಸಿನ ಒಳಗಿದ್ದ ಪ್ರಯಾಣಿಕರು ಗಾಬರಿಯಿಂದ ಡ್ರೈವರ್ ಕಡೆ ನೋಡಿದಾಗ ಡ್ರೈವರ್ ಕೈಯಲ್ಲಿ ಕಳಚಿದ ಸ್ಟೇರಿಂಗ್ ತಿರುಗುತ್ತಿತ್ತು.
ಮೇಲಿನಕೇರಿಯ ಪೊಲೀಸ್ ಮಾಹಿತಿ ಕೇಂದ್ರದ ಬಳಿ ಬಸ್ಸಿನ ಸ್ಟೇರಿಂಗ್ ತುಂಡಾಯಿತು. ಕೊನೆಗೆ ರಸ್ತೆ ಅಂಚಿನಲ್ಲಿದ್ದ ಬಾಡಿಗೆ ಬೈಕಿಗೆ ಗುದ್ದುವುದರಿಂದ ಬಚಾವಾಯಿತು. ಅಡ್ಡಾದಿಡ್ಡಿ ಚಲಿಸಿ ಕೊನೆಗೆ ರಸ್ತೆಗೆ ಅಡ್ಡಲಾಗಿ ಬಸ್ಸು ನಿಂತಿತು. ರಾತ್ರಿ 8.15ಕ್ಕೆ ಅಂಕೋಲಾದಿoದ ಹೊರಟ ಬಸ್ಸು ಮುಕ್ಕಾಲು ತಾಸಿನ ಅವಧಿಯಲ್ಲಿ ಸಾಕಷ್ಟು ಅವಾಂತರಗಳನ್ನು ಮಾಡಿತ್ತು.
ಬಸ್ಸು ಅಡ್ಡಾದಿಡ್ಡಿ ಚಲಿಸುವುದನ್ನು ನೋಡಿದ ಪ್ರಯಾಣಿಕರು ಬೊಬ್ಬೆ ಹೊಡೆದರು. ಬಸ್ಸು ನೋಡಿದ ಜನರು ಆ ಕಡೆ- ಈ ಕಡೆ ಓಡಿ ಪ್ರಾಣ ಉಳಿಸಿಕೊಂಡರು. ಕೊನೆಗೆ ಎಲ್ಲರೂ ಸುರಕ್ಷಿತವಾಗಿ ಇಳಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು. `ಸಾಕಷ್ಟು ಜನ ಜಂಗುಳಿ ಇಲ್ಲದ ಕಾರಣ ಜೀವಹಾನಿ ನಡೆದಿಲ್ಲ. ಜನ ಹೆಚ್ಚು ಓಡಾಡುವ ಶನಿವಾರ ಅಥವಾ ಭಾನುವಾರ ಈ ರೀತಿ ಆಗಿದ್ದರೆ ಗತಿಯೇನು?’ ಎಂದು ಅಲ್ಲಿದ್ದವರು ಪ್ರಶ್ನಿಸಿದರು.
ಅದಾದ ನಂತರ ಅಂಕೋಲಾದಿoದ ನಿಗಮದ ಮೆಕಾನಿಕ್ ಬಂದು ಸ್ಟೇರಿಂಗ್ ಜೋಡಿಸಿದರು. ಜನ ಹೊಸ ಬಸ್ ಓಡಿಸುವಂತೆ ಆಗ್ರಹಿಸಿದರು. ವಾರದ ಹಿಂದೆ ಸಹ ಇದೇ ರೀತಿ ಸಮಸ್ಯೆ ಆಗಿದನ್ನು ಜನ ನೆನಪಿಸಿದರು.
Discussion about this post