ಶೌಚಾಲಯ ಬಳಸುವ ಬದಲು ಬಹಿರ್ದಸೆಗೆ ಕಾಡಿಗೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ದಾಳಿಗೆ ಒಳಗಾದ ಮುಂಡಗೋಡಿನ ದೇವರಾಜ್ ಡೊಳ್ಳೇಶ್ವರ ಅವರು ಶಿರಸಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂಡಗೋಡದ ಕೋಡಂಬಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಗಾಗ ಕರಡಿ ಸಂಚರಿಸುತ್ತದೆ. ಅದಾಗಿಯೂ ಅಲ್ಲಿನ ಹಳ್ಳದಮನೆ ನಿವಾಸಿ ದೇವರಾಜ್ ಡೊಳ್ಳೇಶ್ವರ ನಿತ್ಯ ಕಾಡಿಗೆ ಹೋಗುತ್ತಾರೆ. ಶನಿವಾರ ಬೆಳಗ್ಗೆ ಮನೆಯಿಂದ 1ಕಿಮೀ ದೂರದ ಕಾಡಿಗೆ ಹೋಗಿದ್ದ ದೇವರಾಜ್ ಅವರ ಮೇಲೆ ಎರಡು ಕರಡಿ ದಾಳಿ ನಡೆಸಿದ್ದು, ಅವರು ಇದೀಗ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ADVERTISEMENT
ಕಾಡಿನಲ್ಲಿದ್ದ ನೀರಿನ ಹೊಂಡದ ಬಳಿ ಗಲೀಜು ಮಾಡುತ್ತಿದ್ದ ದೇವರಾಜ್ ಅವರ ಮೇಲೆ ಎರಡು ಕರಡಿ ಮುಗಿಬಿದ್ದವು. ಆಗ ಅವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತ ಊರಿಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಅದಾದ ನಂತರ ಊರಿನವರು ದೇವರಾಜ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ADVERTISEMENT
Discussion about this post