ಮೇಷ ರಾಶಿ: ದೈಹಿಲ ಲಾಭ ಹಾಗೂ ಮಾನಸಿಕ ದೃಢತೆಗಾಗಿ ಧ್ಯಾನ ಮಾಡಿ. ಯೋಗಾಸನ ಮಾಡುವುದನ್ನು ಬಿಡದಿರಿ. ಹಣಕಾಸು ನಿರ್ವಹಣೆಯ ಶಿಸ್ತು ಸರಿಯಾಗಿ ಪ್ರಯೋಜನಕ್ಕೆ ಬರಲಿದೆ. ದೊಡ್ಡ ಸಮಸ್ಯೆಯಿಂದ ಪಾರಾಗಲಿದ್ದೀರಿ.
ವೃಷಭ ರಾಶಿ: ಬಿಡುವಿರದ ಕಾರ್ಯಕ್ರಮಗಳು ಬರಲಿದೆ. ಆರೋಗ್ಯ ಚನ್ನಾಗಿರಲಿದೆ. ಬದುಕಿನ ಬಗ್ಗೆ ಯೋಜಿಸಿ. ಜೀವನ ರಕ್ಷಣೆ ನಿಮ್ಮ ನಿಜವಾದ ಹೊಣೆಗಾರಿಕೆ ಎಂಬುದನ್ನು ನೆನಪಿಸಿಕೊಳ್ಳಿ. ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ.
ಮಿಥುನ ರಾಶಿ: ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆ ಕಡೆ ಸೆಳೆಯದಿರಲಿ. ಕೆಟ್ಟ ಸಮಯಗಳು ಹೆಚ್ಚಿನ ಅನುಭವ ನೀಡುತ್ತದೆ. ಸಿಂಪಡಿಗಾಗಿ ಕಾಯಬೇಡಿ. ಸಮಯ ಹಾಳು ಮಾಡದೇ ಜೀವನ ಪಾಠ ಕಲಿಯಲು ಶುರು ಮಾಡಿ. ಧಾರ್ಮಿಕ ಮತ್ತು ಶುದ್ಧ ಪ್ರೀತಿಯನ್ನು ಅನುಭವಿಸಿ.
ಕರ್ಕ ರಾಶಿ: ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿಗೆ ಅಲ್ಪ ಪ್ರಮಾಣದ ಪರಿಹಾರ ಸಿಗಲಿದೆ. ಅನೇಕ ಸಮಸ್ಯೆಗಳು ದೂರವಾಗಲಿದೆ.
ಸಿಂಹ ರಾಶಿ: ವೃತ್ತಿಯ ಬಗ್ಗೆ ಯೋಚಿಸಿ. ಹೊರ ಚಟುವಟಿಕೆಗಳಲ್ಲಿ ಸಮಯ ಕಳೆಯುವುದು ಉತ್ತಮವಲ್ಲ. ಮಕ್ಕಳ ಓದಿನ ಬಗ್ಗೆ ಕಾಳಜಿಯಿರಲಿ. ಪ್ರೀತಿಪಾತ್ರರು ಫೋನ್ ಮಾಡಿದಾಗ ಖುಷಿ ಆಗಲಿದೆ. ಈ ದಿನ ರೋಮಾಂಚನಕಾರಿ ಆಗಿರಲಿದೆ.
ಕನ್ಯಾ ರಾಶಿ: ಆರ್ಥಿಕ ಅಭಿವೃದ್ಧಿ ಸಾಧ್ಯ. ಸಾಲ ನೀಡಿದ ಹಣ ಮರಳಿ ಬರಲಿದೆ. ಪೋಷಕರ ಆರೋಗ್ಯ ಸುಧಾರಣೆ ಆಗಲಿದೆ. ಪಾಲಕರಿಂದ ಪ್ರೀತಿ-ಮೆಚ್ಚುಗೆ ಸಿಗುತ್ತದೆ.
ತುಲಾ ರಾಶಿ: ಉದ್ಯೋಗಕ್ಕೆ ಸಂಬoಧಿಸಿರುವ ಜನರಿಗೆ ಹಣದ ಅಗತ್ಯ ಎದುರಾಗುತ್ತದೆ. ಅನಗತ್ಯ ಖರ್ಚು ಮಾಡಬೇಡಿ. ಆರೋಗ್ಯ ಸರಿಯಾಗಲಿದೆ.
ವೃಶ್ಚಿಕ ರಾಶಿ: ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ. ಸ್ನೇಹಿತರ ಸಹಾಯ ಸಿಗಲಿದೆ. ಹಣಕಾಸಿನ ಸಮಸ್ಯೆ ದೂರವಾಗಲಿದೆ. ಹೂಡಿಕೆ ವಿಷಯದಲ್ಲಿ ಜಾಗರೂಕರಾಗಿರಿ. ತಾಯಿ ಆರೋಗ್ಯದ ಮೇಲೆ ಗಮನವಿಡಿ.
ಧನು ರಾಶಿ: ಒತ್ತಡದಿಂದ ಹೊರ ಬರಲು ಮಕ್ಕಳ ಜೊತೆ ಸಮಯ ಕಳೆಯಿರಿ. ಆಸ್ತಿ ವ್ಯವಹಾರಗಳು ಲಾಭ ತರಲಿದೆ. ಇತರರ ಸಲಹೆಪಡೆಯುವುದು ಉತ್ತಮ.
ಮಕರ ರಾಶಿ: ವೆಚ್ಚಗಳು ಹೆಚ್ಚಾಗಲಿದೆ. ಪೂರ್ವ ನಿಗಧಿತ ಕಾರ್ಯಕ್ರಮಗಳು ಮುಂದೂಡುವ ಸಾಧ್ಯತೆಗಳಿದೆ. ಆರೋಗ್ಯದ ಸಮಸ್ಯೆ ಬರಲಿದೆ. ಭಾವನಾತ್ಮಕ ವಿಷಯಗಳು ಕಾಡುತ್ತವೆ.
ಕುಂಭ ರಾಶಿ: ಅನಾರೋಗ್ಯಕ್ಕೆ ಔಷಧಿಪಡೆಯಿರಿ. ವಿವಿಧ ಕಾರಣಗಳಿಂದ ಹಣ ಖರ್ಚಾಗಲಿದೆ. ಆರ್ಥಿಕ ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಕೋರ್ಟು ಕೇಸುಗಳ ಅಧ್ಯಯನ ಮಾಡಿದರೆ ಯಶಸ್ಸು ಸಿಗಲಿದೆ.
ಮೀನ ರಾಶಿ: ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ. ದೊಡ್ಡ ದೊಡ್ಡ ನಿರ್ಧಾರ ಮಾಡುವಾಗ ಎಚ್ಚರಿಕೆವಹಿಸಿ. ಅನಗತ್ಯ ವೆಚ್ಚಗಳಿಂದ ದೂರವಿರಿ
Discussion about this post