ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗೆಳುವ ತರಾತುರಿಯಲ್ಲಿ ಕಾಂಗ್ರೆಸ್ ನಾಯಕರನ್ನು ನಾಯಿಗೆ ಹೋಲಿಸಿದ್ದಾರೆ. ಈ ವಿಷಯ ಪ್ರಸ್ತಾಪಿಸಿರುವ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ `ಮೋದಿ ದಿನಾ ಬೆಳಗ್ಗೆ ಟಿವಿಯಲ್ಲಿ ಬೊಗಳುತ್ತಾರೆ. ಹಿಂದಿನ ಯಾವ ಪ್ರಧಾನಿಯೂ ಈ ರೀತಿ ಬೊಗಳುತ್ತಿರಲಿಲ್ಲ’ ಎಂಬ ಹೇಳಿಕೆ ನೀಡಿದ್ದರು. ಪ್ರಧಾನಿ ಮೋದಿ ಬಿಜೆಪಿಗರು ಎಂಬ ಕಾರಣಕ್ಕೆ `ಬೊಗಳುವ’ ಎಂಬ ಶಬ್ದ ಬಳಸಿದ ನಿಲುವನ್ನು ರಾಮು ನಾಯ್ಕ ಖಂಡಿಸಿದ್ದಾರೆ. ಅದರೊಂದಿಗೆ ಜವಾಹರಲಾಲ್ ನೆಹರು, ಇಂದಿರಾಗಾoಧಿ, ರಾಜೀವ ಗಾಂಧಿ, ಪಿ ವಿ ನರಸಿಂಹರಾವ್, ಮನಮೋಹನ ಸಿಂಗ ಅವರಿಗೂ `ಬೊಗಳದ ನಾಯಿಗಳು’ ಎಂಬ ಅರ್ಥದಲ್ಲಿ ಮಾತನಾಡಿರುವ ಬಗ್ಗೆ ಮಾಧ್ಯಮದ ಗಮನಸೆಳೆದಿದ್ದಾರೆ.
`ಕಾಂಗ್ರೆಸ್ಸಿಗರು ಕೊಳಕು ಮನಸ್ಥಿತಿಯವರು. ಅವರ ಮನಸ್ಥಿತಿ ಖರ್ಗೆಯವರ ಭಾಷಣದಿಂದಲೇ ಅರ್ಥವಾಗುತ್ತದೆ’ ಎಂದು ರಾಮು ನಾಯ್ಕ ಹೇಳಿಕೊಂಡಿದ್ದಾರೆ.
Discussion about this post