ಅಂಕೋಲಾದಲ್ಲಿ ಆಸ್ತಿ ವಿಷಯವಾಗಿ ನಡೆಯುತ್ತಿದ್ದ ಜಗಳ ಹೊಡೆದಾಟದ ಸ್ವರೂಪ ಪಡೆದಿದ್ದು, ಮೂವರು ಸೇರಿ ಒಬ್ಬರ ಕಾಲು ಮುರಿದಿದ್ದಾರೆ.
ಅಂಕೋಲಾ ಕಣಗಿಲ್’ನ ದರ್ಶನ ನಾಯ್ಕ, ನಿತ್ಯಾನಂದ ನಾಯ್ಕ ಹಾಗೂ ಪ್ರಥ್ವೀಶ್ ನಾಯ್ಕ ಸೇರಿ ಹಿಚ್ಕಡ ದಂಡೆಭಾಗದ ಬೊಮ್ಮ ನಾಯ್ಕ ಅವರಿಗೆ ಥಳಿಸಿದ್ದಾರೆ. ಆ ಮೂವರು ಸೇರಿ ಬೊಮ್ಮ ನಾಯ್ಕ ಅವರ ಎರಡು ಕಾಲು ಮುರಿದಿದ್ದು, ಬೊಮ್ಮ ನಾಯ್ಕ ಅವರು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ದಾಖಲಾದ ದೂರಿನ ಪ್ರಕಾರ ದಂಡೆಭಾಗದ ಬೊಮ್ಮ ನಾಯ್ಕ ಹಾಗೂ ಎದುರಾಳಿಗಳ ನಡುವೆ ಆಸ್ತಿ ವಿಷಯವಾಗಿ ಮೊದಲಿನಿಂದಲೂ ತಕರಾರು ನಡೆಯುತ್ತಿತ್ತು. ಬೊಮ್ಮ ನಾಯ್ಕ ಅವರು ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ದೂರು ಹಿಂಪಡೆಯುವAತೆ ದರ್ಶನ ನಾಯ್ಕ, ನಿತ್ಯಾನಂದ ನಾಯ್ಕ ಹಾಗೂ ಪ್ರಥ್ವೀಶ್ ನಾಯ್ಕ ಪದೇ ಪದೇ ಒತ್ತಾಯಿಸುತ್ತಿದ್ದರು. ಆದರೆ, ಇದಕ್ಕೆ ಬೊಮ್ಮ ನಾಯ್ಕ ಅವರು ಒಪ್ಪಿರಲಿಲ್ಲ.
ಜುಲೈ 17ರಂದು ಶಟಗೇರಿ ಪಂಚಾಯತದ ಬಳಿ ಬೊಮ್ಮ ನಾಯ್ಕ ಅವರು ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಆಗ, ದರ್ಶನ ನಾಯ್ಕ ಅವರು ಬೈಕನ್ನು ಅಡ್ಡಗಟ್ಟಿದರು. ದರ್ಶನ ನಾಯ್ಕ ಜೊತೆ ನಿತ್ಯಾನಂದ ನಾಯ್ಕ ಹಾಗೂ ಪ್ರಥ್ವೀಶ್ ನಾಯ್ಕ ಸೇರಿ ಬೊಮ್ಮ ನಾಯ್ಕ ಅವರಿಗೆ ಬಡಿಗೆಯಿಂದ ಬಾರಿಸಿದರು.
`ನ್ಯಾಯಾಲಯದಲ್ಲಿನ ಪ್ರಕರಣ ಹಿಂಪಡೆಯದೇ ಇದ್ದರೆ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಸಿ ಆ ಮೂವರು ಅಲ್ಲಿಂದ ಪರಾರಿಯಾದರು. ಈ ಹೊಡೆದಾಟದಲ್ಲಿ ಬೊಮ್ಮ ನಾಯ್ಕ ಅವರು ಗಾಯಗೊಂಡರು. ಏಳಲು ಆಗದ ಸ್ಥಿತಿಯಲ್ಲಿ ಬಿದ್ದಿದ್ದ ಬೊಮ್ಮ ನಾಯ್ಕ ಅವರನ್ನು ಅವರ ಸಂಬoಧಿಕರೊಬ್ಬರು ಆಸ್ಪತ್ರೆಗೆ ಸೇರಿಸಿದರು.
ಚಿಕಿತ್ಸೆಪಡೆದ ನಂತರ ಬೊಮ್ಮ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದು, ತಮ್ಮ ಮೇಲೆ ಕೈ ಮಾಡಿದವರ ವಿರುದ್ಧ ದೂರು ನೀಡಿದರು. ಆ ಮೂಲಕ ಬೊಮ್ಮ ನಾಯ್ಕ ಅವರು ಜಮೀನು ವಿವಾಧದ ಪ್ರಕರಣದ ಜೊತೆ ಹೊಡೆದಾಟ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತಂದರು.
Discussion about this post