ಶಿರಸಿಯಲ್ಲಿ ಸರಣಿ ಮನೆಕಳ್ಳತನ ನಡೆದಿದ್ದು, ಶ್ವಾನದಳ ಆಗಮಿಸಿ ಶೋಧ ನಡೆಸಿದೆ. ಇಲ್ಲಿನ ಮೂರು ಮನೆಗಳ ಮುಂಬಾಗಿಲು ಮುರಿದು ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ.
ಶಿರಸಿಯ ಚೌಡೇಶ್ವರಿ ಕಾಲೋನಿಗೆ ನುಗ್ಗಿದ ಕಳ್ಳರಿಗೆ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಸಿಕ್ಕಿದೆ. ಕೆ ಎಸ್ ಆರ್ ಟಿಸಿ ನಿವೃತ್ತ ಸಿಬ್ಬಂದಿ ಮಂಜು ಶೇಟ್ ಇವರ ಮನೆ ಮತ್ತು ಇವರ ಬಾಡಿಗೆ ಮನೆ ಹಾಗು ಇದೇ ಮನೆಯ ಹತ್ತಿರದಲ್ಲಿರುವ ಜಕ್ರಿಯಾ ಮಿಸ್ಗರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಜೊತೆಗೆ ಪಕ್ಕದಲ್ಲಿದ್ದ ಇನ್ನೊಂದು ಮನೆಗೂ ಕಳ್ಳರು ಕನ್ನ ಹಾಕಿದ್ದಾರೆ.
ಸರಣಿ ಕಳ್ಳತನದ ವಿಷಯ ಅರಿತ ಡಿವೈಎಸ್‌ಪಿ ಗೀತಾ ಪಾಟೀಲ್ ತನಿಖೆ ಚುರುಕುಗೊಳಿಸಿದರು. ಪಿಎಸ್‌ಐ ರತ್ನಾ ಕುರಿ ಹಾಗೂ ರಾಜಕುಮಾರ ಉಕ್ಕಲಿ ಮನೆ ಪರಿಶೀಲನೆ ಮಾಡಿದರು. ಕಾರವಾರದಿಂದ ಶ್ವಾನದಳ ಆಗಮಿಸಿದ್ದು, ಎಲ್ಲಡೆ ಶೋಧ ನಡೆಸಿತು. ಬೆರಳಚ್ಚು ತಜ್ಞರು ಸಹ ಆಗಮಿಸಿ ಸಾಕ್ಷಿ ಸಂಗ್ರಹಿಸಿದರು.
Discussion about this post