ಬೆಳಗಾವಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸ್ಲೀಪರ್ ಬಸ್ಸು ಅಂಕೋಲಾ ಬಳಿ ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಸಾವನಪ್ಪಿದ್ದಾರೆ.
ಭಾನುವಾರ ರಾತ್ರಿ ಬೆಳಗಾವಿಯಿಂದ ಹೊರಟ ಬಸ್ಸು ಸೊಮವಾರ ನಸುಕಿನಲ್ಲಿ ಅಂಕೋಲಾದ ಅಗಸೂರಿನಲ್ಲಿ ಅಪಘಾತಕ್ಕೀಡಾಯಿತು. ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಅಗಸೂರಿನ ಸೇತುವೆ ಮೇಲಿಂದ ಹಳ್ಳಕ್ಕೆ ಹಾರಿತು. ಬಸ್ಸು ಬಿದ್ದ ರಭಸಕ್ಕೆ ಪ್ರಯಾಣಿಕರೊಬ್ಬರು ಅಲ್ಲಿಯೇ ಸಾವನಪ್ಪಿದರು. ಬಸ್ಸಿನ ಒಳಗಿದ್ದ 18 ಪ್ರಯಾಣಿಕರು ಹಳ್ಳದ ನೀರಿನಲ್ಲಿ ಸಿಲುಕಿದರು.
ಅಪಘಾತದ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದರು. ಕ್ರೇನ್ ಸಹಾಯದಿಂದ ಬಸ್ಸಿನ ಒಳಗಿದ್ದ ಶವ ಹೊರ ತೆಗೆದರು. ಐವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿದರು. ಉಳಿದ ಪ್ರಯಾಣಿಕರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಅಲ್ಲಿ ಅವರಿಗೆ ಆರೈಕೆ ಮಾಡಲಾಗಿದೆ.
Discussion about this post