ಈಗಾಗಲೇ 700ಕ್ಕೂ ಅಧಿಕ ಜನರಿಗೆ ಯೋಗ್ಯ ಉದ್ಯೋಗ ಕೊಡಿಸಿರುವ `ಯುವಜಯ ಪೌಂಡೇಶನ್’ ಇದೀಗ ಇನ್ನಷ್ಟು ಅರ್ಹರಿಗೆ ಉದ್ಯೋಗ ಕೊಡಿಸುವ ತರಬೇತಿ ಶುರು ಮಾಡಿದೆ. ಶಿರಸಿ, ಮುಂಡಗೋಡಿನ ಜೊತೆ ಚಿತ್ರದುರ್ಗದಲ್ಲಿಯೂ ಶಾಖೆಹೊಂದಿರುವ ಯುವಜಯ ಪೌಂಡೇಶನ್ ಸದ್ಯ ಆನ್‌ಲೈನ್ ಹಾಗೂ ಆಫ್‌ಲೈನ್ ತರಬೇತಿ ನಡೆಸಲು ಉದ್ದೇಶಿಸಿದೆ.
ವಿವಿಧ ಕಂಪನಿಗಳಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಮೂವರು ಕೊರೊನಾ ಅವಧಿಯಲ್ಲಿ ಊರಿಗೆ ಮರಳಿ ಉದ್ಯೋಗ ಕೊಡಿಸುವ ಸಂಸ್ಥೆ ಸ್ಥಾಪಿಸಿದರು. ಅದರ ಪರಿಣಾಮ `ಯುವಜಯ ಪೌಂಡೇಶನ್’ ನಾಲ್ಕೇ ವರ್ಷದಲ್ಲಿ ಹೆಮ್ಮರವಾಗಿ ಬೆಳೆದಿದೆ. ಕೊರೊನಾದಂಥಹ ಸಂಕಷ್ಟದ ಅವಧಿಯಲ್ಲಿ ಊರಿಗೆ ಮರಳಿದ 11 ಜನರಿಗೆ ಈ ಸಂಸ್ಥೆಯೇ ಅರೆಕಾಲಿಕ ಉದ್ಯೋಗವನ್ನು ಒದಗಿಸಿದೆ. ಕಂಪನಿಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ಒದಗಿಸುವುದರ ಜೊತೆ ಉದ್ಯೋಗ ಆಕಾಂಕ್ಷಿಗಳಿಗೂ ಯೋಗ್ಯ ಕೆಲಸ ಕೊಡಿಸುವಲ್ಲಿ ಯುವಜಯ ಪೌಂಡೇಶನ್ ಶ್ರಮಿಸುತ್ತಿದೆ.
ಕೊರೊನಾ ಅವಧಿಯಲ್ಲಿ ಅನೇಕ ಕಂಪನಿಗಳು ನಷ್ಟಕ್ಕೆ ಒಳಗಾಗಿದ್ದವು. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದರು. ಅದಕ್ಕಿಂತ ಮುಖ್ಯವಾಗಿ ಆಗಷ್ಟೇ ಭವಿಷ್ಯದ ಕನಸು ಕಂಡಿದ್ದ ಗ್ರಾಮೀಣ ಪ್ರತಿಭೆಗಳು ಮನೆಯಲ್ಲಿಯೇ ಕಮರಿಹೋಗುವ ಆತಂಕ ಎದುರಿಸುತ್ತಿದ್ದರು. ಸಮಾಜದ ಮುಖ್ಯವಾಹಿನಿಗೆ ಬರಬೇಕಿದ್ದ ಗ್ರಾಮೀಣ ಪದವಿದರರ ಪ್ರತಿಭಾನ್ವೇಶಣೆ ಬಗ್ಗೆ ಚಿಂತಿಸಿದ ಗಿರೀಶ ನಾಗನೂರು ಹಾಗೂ ಕಾರ್ತಿಕ ಹೆಗಡೆ ಒಟ್ಟಾಗಿ ಆ ವೇಳೆ `ಯುವಜಯ ಪೌಂಡೇಶನ್’ ಸ್ಥಾಪಿಸಿದರು.
ಗಿರೀಶ ನಾಗನೂರು ಅವರು ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಕಾರ್ತಿಕ ಹೆಗಡೆ ಅವರು ಸ್ವಯಂ ಸೇವಾ ಸಂಸ್ಥೆಯೊoದರಲ್ಲಿ 16 ವರ್ಷದ ಅನುಭವಪಡೆದಿದ್ದರು. ಸ್ನೇಹಿತರೊಬ್ಬರು ಯುವಜಯ ಪೌಂಡೇಶನ್’ಗೆ ಆಧಾರ ಸ್ಥಂಬವಾಗಿದ್ದು, ಈ ಮೂವರು ಸೇರಿ 2021ರ ಮೇ ತಿಂಗಳಿನಿoದ ಗ್ರಾಮೀಣ ಪದವಿಧರರಿಗೆ ಉಚಿತ ತರಬೇತಿ ನೀಡಲು ಶುರು ಮಾಡಿದರು. ಕೊರೊನಾ ಕಾಲಘಟ್ಟದ ಅವಧಿಯಲ್ಲಿ ಆನ್‌ಲೈನ್ ಮೂಲಕ ತರಬೇತಿ ಕೊಟ್ಟ ಯುವಜನ ಪೌಂಡೇಶನ್ ಅದಾದ ಮೇಲೆ ಆಫ್‌ಲೈನ್ ಮೂಲಕವೂ ತರಬೇತಿ ನೀಡುವ ಕಾಯಕ ಮುಂದುವರೆಸಿತು. ಪರಿಣಾಮ ಗ್ರಾಮೀಣ ಭಾಗದ ಪ್ರತಿಭಾನ್ವಿತರು ಪ್ರತಿಷ್ಠಿತ ಕಂಪನಿ ಸೇರಿ ಕನಸಿನ ಉದ್ಯೋಗ ಆರಿಸಿಕೊಂಡರು.
`ಗ್ರಾಮೀಣ ಭಾಗದ ಪದವಿದರರಿಗೆ ಉದ್ಯೋಗಕ್ಕಾಗಿ ಎಲ್ಲಿ ಹೋಗಬೇಕು? ಯಾರನ್ನು ಸಂಪರ್ಕಿಸಬೇಕು. ಬೆಂಗಳೂರಿಗೆ ಹೋದರೂ ಅಲ್ಲಿ ಯಾವ ಕಂಪನಿಯನ್ನು ಸಂದರ್ಶಿಸಬೇಕು? ಎಂಬ ಮಾಹಿತಿ ಇರಲಿಲ್ಲ. ಅಂಥವರಿಗೆ ಯೋಗ್ಯ ಮಾರ್ಗದರ್ಶನ ನೀಡುವುದರ ಜೊತೆ ಉದ್ಯೋಗ ನೇಮಕಾತಿಯ ಸಂಪೂರ್ಣ ಮಾಹಿತಿ ನೀಡುವುದಕ್ಕಾಗಿ ಯುವಜನ ಪೌಂಡೇಶನ್ ಶ್ರಮಿಸುತ್ತಿದೆ’ ಎಂದು ಕಾರ್ತಿಕ ಹೆಗಡೆ ವಿವರಿಸಿದರು. ಸದ್ಯ ಶಿರಸಿ, ಚಿತ್ರದುರ್ಗ, ಮುಂಡಗೋಡ ಮೂರು ಕಡೆ ಈ ಸಂಸ್ಥೆಯ ತರಬೇತಿ ನಡೆಯುತ್ತಿದೆ. ಉಡುಪಿಯಲ್ಲಿ ಸಹ ತರಬೇತಿ ಕೇಂದ್ರ ತೆರೆಯುವ ಸಿದ್ಧತೆ ನಡೆದಿದೆ. ಅಂಡಮಾನ್ ನಿಕೋಬಾರ್ ಹಾಗೂ ತಮಿಳುನಾಡಿನವರಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಿ ಉದ್ಯೋಗವಕಾಶದ ಮಾಹಿತಿ ನೀಡಲಾಗಿದೆ. ಈಗಲೂ ಆನ್‌ಲೈನ್ ಮೂಲಕ ತರಬೇತಿಗೆ ಹಾಜರಾಗುವವರಿಗೆ ಅವಕಾಶ ನೀಡಲಾಗುತ್ತದೆ.
ಯುವಜಯ ಪೌಂಡೇಶನ್’ನ ತರಬೇತಿಪಡೆದ ಅಭ್ಯರ್ಥಿಗಳು ಹೇಳುವುದೇನು? ವಿಡಿಯೋ ನೋಡಿ.. ಇನ್ನಷ್ಟು ಮಾಹಿತಿ ಮುಂದೆ ಓದಿ..
ಸದ್ಯ 5 ಸಾವಿರ ರೂಪಾಯಿಗೆ ಎರಡು ತಿಂಗಳ ಕಾಲ ಯುವಜಯ ಪೌಂಡೇಶನ್ ಉದ್ಯೋಗ ನೇಮಕಾತಿ ತರಬೇತಿ ನೀಡುತ್ತದೆ. ಯುವಜಯ ಪೌಂಡೇಶನ್’ನ ತರಬೇತಿಯ ಅವಧಿ ಬೆಳಗ್ಗೆ 10ರಿಂದ 12.30. ಮಧ್ಯಾಹ್ನ ಮಧ್ಯಾಹ್ನ 2ರಿಂದ 4.30. ಬೇರೆ ಬೇರೆ ಊರುಗಳಿಂದ ಆಗಮಿಸುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಪಿಜಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಪಡೆಯಲು ಅಗತ್ಯವಿರುವ ಕೌಶಲ್ಯದ ಬಗ್ಗೆ ಇಲ್ಲಿ ಕಲಿಸಲಾಗುತ್ತದೆ. ಎರಡು ತಿಂಗಳ ತರಬೇತಿ ಮುಗಿಸಿದ ಅಭ್ಯರ್ಥಿಗಳನ್ನು ಬೆಂಗಳೂರಿಗೆ ಕರೆದೊಯ್ದು, ಅಲ್ಲಿ 10ಕ್ಕೂ ಅಧಿಕ ಕಂಪನಿಯ ಸಂದರ್ಶನ ಎದುರಿಸಲು ಯುವಜಯ ಪೌಂಡೇಶನ್ ಪ್ರೇರೇಪಿಸುತ್ತದೆ. ಅಭ್ಯರ್ಥಿಗೆ ಸೂಕ್ತವೆನಿಸುವ ಉದ್ಯೋಗ ಸಿಗುವವರೆಗೂ ಯುವಜಯ ಪೌಂಡೇಶನ್ ಬೆನ್ನೆಲುಬಾಗಿರುತ್ತದೆ. ಸದ್ಯ ಯುವಜಯ ಪೌಂಡೇಶನ್’ನ ತರಬೇತಿಪಡೆದವರು 52ಕ್ಕೂ ಅಧಿಕ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಮೊದಲ ಬ್ಯಾಚಿನಲ್ಲಿ ತರಬೇತಿಪಡೆದವರು ಉನ್ನತ ಹುದ್ದೆಯಲ್ಲಿದ್ದಾರೆ.
ಸಾಧನೆ ಮಾಡಬೇಕು. ಯೋಗ್ಯ ಉದ್ಯೋಗಪಡೆಯಬೇಕು ಎಂದರೆ ಮೊದಲ ಎರಡು ವರ್ಷ ಕಷ್ಟಪಡಲು ಸಿದ್ಧರರಿರಬೇಕು. ಮೊದಲ ಮೆಟ್ಟಿಲು ಹತ್ತಿದ ನಂತರ ಅವಕಾಶಗಳು ಹುಡುಕಿಬರಲಿದ್ದು, ಆ ನಂತರದ ದುಡಿಮೆ ಸುರಳಿತ’ ಎಂದು ಯುವಜಯ ಪೌಂಡೇಶನ್ ಮೂಲಕ ತರಬೇತಿಪಡೆದು ಉದ್ಯೋಗಪಡೆದ ಗಾಯತ್ರಿ ಅವರು ಅನಿಸಿಕೆ ಹಂಚಿಕೊ0ಡರು.
ಸದ್ಯ ಯುವಜಯ ಪೌಂಡೇಶನ್’ನ ತರಬೇತಿಗಾಗಿ ಪ್ರವೇಶ ಶುರುವಾಗಿದೆ. ನಿಮ್ಮಲ್ಲಿರುವ ಕೌಶಲ್ಯ ಹೆಚ್ಚಿಸಿಕೊಂಡು ಕನಸಿನ ಉದ್ಯೋಗಪಡೆಯಲು ಇಲ್ಲಿ ವಾಟ್ಸಪ್ ಮಾಡಿ: 8088549193
#Sponsored
Discussion about this post