ಯಲ್ಲಾಪುರದ ಗುಳ್ಳಾಪುರದಲ್ಲಿ ನಡೆದ ವನದುರ್ಗಾ ಜಾತ್ರೆಯಲ್ಲಿ ಹೊಡೆದಾಟ ನಡೆದಿದೆ. ನಾಟಕ ನೋಡುತ್ತಿದ್ದ ವೆಂಕಟ್ರಮಣ ಸಿದ್ದಿ ಅವರಿಗೆ ರವಿ ಸಿದ್ದಿ ಹಾಗೂ ರಾಮಾ ಆಚಾರಿ ಮುಖದ ಮೇಲೆ ಗುದ್ದಿದ್ದಾರೆ.
ಯಲ್ಲಾಪುರದ ಮಂಚಿಕೇರಿಯ ವೆಂಕಟ್ರಮಣ ಸಿದ್ದಿ ಅವರು 2025 ಏಪ್ರಿಲ್ 24ರಂದು ಗುಳ್ಳಾಪುರಕ್ಕೆ ಹೋಗಿದ್ದರು. ಆ ದಿನ ಸಂಜೆ ಅಲ್ಲಿ ನಡೆಯುವ ವನದುರ್ಗಾ ಜಾತ್ರೆಯಲ್ಲಿ ಅವರು ಭಾಗವಹಿಸಿದ್ದರು. ಜಾತ್ರೆ ಅಂಗವಾಗಿ ನಾಟಕ ಆಯೋಜಿಸಿದ್ದು, ಆ ನಾಟಕವನ್ನು ನೋಡುತ್ತಿದ್ದರು.
ಆಗ, ಅಲ್ಲಿಗೆ ಬಂದ ಗುಳ್ಳಾಪುರದ ರವಿ ಸಿದ್ದಿ ಹಾಗೂ ರಾಮಾ ಆಚಾರಿ ಏಕಾಏಕಿ ಬೈಗುಳ ಶುರು ಮಾಡಿದರು. ವೆಂಕಟ್ರಮಣ ಸಿದ್ದಿ ಅವರ ಮುಖದ ಮೇಲೆ ಬಾರಿಸಿದರು. `ಈ ಹಿಂದೆ ನಮ್ಮ ಮೊಬೈಲ್ ಕಾಣೆಯಾಗಿದ್ದು, ಅದು ಸಿಕ್ಕರೆ ತಂದುಕೊಡಬೇಕು’ ಎಂದು ತಾಕೀತು ಮಾಡಿದರು. ಅದಕ್ಕೆ ವೆಂಕಟ್ರಮಣ ಸಿದ್ಧಿ ತಲೆಯಾಡಿಸಿದರೂ ಮತ್ತೆರಡು ಎರಡು ಪೆಟ್ಟು ನೀಡಿದರು.
ಪೊಲೀಸರು ದಾಖಲಿಸಿದ ದೂರಿನ ಪ್ರಕಾರ, ಈ ಹೊಡೆದಾಟವನ್ನು ಅಲ್ಲಿನ ಜನ ಬಿಡಿಸಿದರು. ತಮ್ಮ ಮೇಲೆ ಹೊಡೆದವರ ವಿರುದ್ಧ ವೆಂಕಟ್ರಮಣ ಸಿದ್ದಿ ನ್ಯಾಯಾಲಯದ ಮೆಟ್ಟಿಲೇರಿದರು. ಮೂರು ತಿಂಗಳ ನಂತರ ಈ ಬಗ್ಗೆ ನೊಂದವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಯಲ್ಲಾಪುರ ಪೊಲೀಸ್ ಠಾಣೆಯ ಮಂಜಪ್ಪ ಪೂಜಾರ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Discussion about this post