ಕರ್ನಾಟಕ-ಗೋವಾ ಗಡಿಭಾಗದ ಕಾಣಕೋಣದಲ್ಲಿ ಜೂಜಾಡುತ್ತಿದ್ದವರ ಮೇಲೆ ಅಲ್ಲಿನ ಪೊಲೀಸರು ದಾಳಿ ನಡೆಸಿದ್ದು, ಉತ್ತರ ಕನ್ನಡ ಜಿಲ್ಲೆಯ 37 ಜನ ಸಿಕ್ಕಿಬಿದ್ದಿದ್ದಾರೆ. ಪ್ರಕರಣದಿಂದ ಬಿಡಿಸಿಕೊಳ್ಳಲು ಕಾರವಾರ, ಕುಮಟಾ, ಶಿರಸಿ, ಯಲ್ಲಾಪುರ, ಅಂಕೋಲಾ, ಶಿರಸಿ, ಮುಂಡಗೋಡಿನ ಜೂಜುಕೋರರು ಅಲ್ಲಿನ ಅಧಿಕಾರಿಗಳ ಕೈ-ಕಾಲು ಹಿಡಿದಿದ್ದಾರೆ.
ಜುಲೈ 22ರ ಬೆಳಗ್ಗೆ ಕಾಣಕೋಣದ ಮನೆಯೊಂದರಲ್ಲಿ ಭಾರೀ ಪ್ರಮಾಣದಲ್ಲಿ ಜೂಜಾಟ ನಡೆಯುತ್ತಿತ್ತು. ಈ ಮಾಹಿತಿ ಆಧರಿಸಿ ಅಲ್ಲಿನ ಪೊಲೀಸರು ಮನೆ ಮೇಲೆ ದಾಳಿ ಮಾಡಿದರು. ಸಿಕ್ಕಿರುವ ಮಾಹಿತಿ ಪ್ರಕಾರ ಕುಮಟಾದ ಮಹೇಂದ್ರ ನಾಯ್ಕ, ಆನಂದ ನಾಯ್ಕ, ಸುಧಾಕರ ನಾಯ್ಕ, ಬರ್ಗಿಯ ಸಂತೋಷ ಗಾಂವ್ಕರ್, ಜಗದೀಶ ಗೌಡ, ಸುಬ್ರಾಯ ಗೌಡ, ಗಜೇಂದ್ರ ಪಡ್ತಿ, ನವೀನ ನಾಯ್ಕ ಈ ವೇಳೆ ಸಿಕ್ಕಿ ಬಿದ್ದರು.
ಯಲ್ಲಾಪುರದ ಕವಿರಾಜ ನಾಯ್ಕ, ವಿಶಾಲ ಅಸುಲಕರ್, ಇರ್ಷಾದ ಮುಲ್ಲಾ, ಗೌಥಮ್ ಕಾಮತ್, ಅಶೋಕ್ ಶೇಟ್, ಧನರಾಜ ನಾಯ್ಕ, ಶಾಂತನ್ ಸಿದ್ದಿ, ಮಾಂತೇಶ ಹರಿಜನ, ಸುನಿಲ ಬೋಟ್ಕೆ ಸಹ ಜೂಜಾಟದಲ್ಲಿ ತೊಡಗಿದ್ದು ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದರು. ಕಾರವಾರದ ಮೋದಿನ್ ರಜಾಕ್, ಕಾಜುಭಾಗದ ಮಹಮದ್ ಶೇಖ್, ಹೆಸ್ಕಾಂ ಕಚೇರಿ ಬಳಿಯ ರಾಘವೇಂದ್ರ ಹರಿಕಂತ್ರ, ಬಾಡ ನಂದನಗದ್ದಾದ ಪ್ರಶಾಂತ ತಳ್ಳೇಕರ್ ವಿರುದ್ಧವೂ ಕಾನೂನು ಕ್ರಮ ಜರುಗಿಸಿದರು.
ಶಿರಸಿಯ ಗಣೇಶ ಭಟ್ಟ ಜೊತೆ ಅಂಕೋಲಾ ಪ್ರಶಾಂತ ನಾಯ್ಕ, ನಾಗರಾಜ ನಾಯ್ಕ,ನಾಗರಾಜ ನಾಯ್ಕ, ಪಾಂಡುರಾಜ ಗೌಡ, ನಾರಾಯಣ ನಾಯ್ಕ, ವಿನಯ ನಾಯ್ಕ, ಬಾಲರಾಜ ಗೌಡ, ಸಂತೋಷ ಗಾಂವ್ಕರ್, ಅವರ್ಸಾದ ಮಂಜುನಾಥ ನಾಯ್ಕ ಪೊಲೀಸರ ಮುಂದೆ ಶರಣಾದರು. ಹೊನ್ನಾವರದ ನಿತಿನ್ ಪಾಲೇಕರ್, ಪರಮೇಶ ನಾಯ್ಕ, ಮುಂಡಗೋಡು ಪಟ್ಟಣದ ಅಲ್ಲಾಬಕ್ಷ ಹರಲಿ, ರಾಘವೇಂದ್ರ ರಾಯ್ಕರ್ ಜೂಜುಕೋರರ ಜೊತೆಯಿದ್ದರು.
ಇದೆಲ್ಲದರ ಜೊತೆ ಚಿತ್ರದುರ್ಗ ಮೂಲದ ಕಾರವಾರ ನಿವಾಸಿ ರಾಜ್ ನಾಗರಾಜ್, ಶಿವಮೊಗ್ಗದ ಪುರೇಶ ಕೃಷ್ಣಪ್ಪ, ಹಾವೇರಿಯ ಸುರೇಶ ಅಪನ್ನ ಹಾಗೂ ಕಾಣಕೋಣದ ರೋನಿ ಫರ್ನಾಂಡಿಸ್ ವಿರುದ್ಧ ಕಾಣಕೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಜೂಜುಕೋರರ ಬಳಿಯಿದ್ದ 5.20 ಲಕ್ಷ ರೂ ಹಣ, ಮೊಬೈಲು-ಬೈಕು ಸೇರಿ ಒಟ್ಟು 16.35 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ಜಪ್ತು ಮಾಡಿದರು.
Discussion about this post