ಯಲ್ಲಾಪುರದ ಕಿರವತ್ತಿ ಗ್ರಾಮ ಪಂಚಾಯತದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಬಹಿರಂಗಪಡಿಸಿದ್ದು, ಇದನ್ನು ಜಯ ಕರ್ನಾಟಕ ಸಂಘಟನೆ ಸ್ವಾಗತಿಸಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸಂಘಟನೆ ತಾಲೂಕು ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಹೇಳಿದ್ದಾರೆ.
`ಗ್ರಾಮ ಪಂಚಾಯತ ಸದಸ್ಯರೊಬ್ಬರು ಭ್ರಷ್ಟಾಚಾರವನ್ನು ಬಯಲಿಗೆಳೆದಿರುವುದು ಸ್ವಾಗತಾರ್ಹ. ಸುನೀಲ ಕಾಂಬಳೆ ಅವರು ಈ ಬಗ್ಗೆ ಹೋರಾಟ ಶುರು ಮಾಡಿದ್ದು, ಅವರಿಗೆ ಜಯ ಕರ್ನಾಟಕ ಬೆಂಬಲವಾಗಿ ನಿಲ್ಲಲಿದೆ. ಗ್ರಾಮ ಪಂಚಾಯತದಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರಗಳು ಬೆಳಕಿಗೆ ಬರಬೇಕು. ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ತಾವೂ ಹೋರಾಟಕ್ಕೆ ಸಿದ್ಧ’ ಎಂದು ವಿಲ್ಸನ್ ಫರ್ನಾಂಡಿಸ್ ಹೇಳಿಕೆ ನೀಡಿದ್ದಾರೆ.
`ಗ್ರಾಮೀಣ ಅಭಿವೃದ್ಧಿಗೆ ಬರುವ ಅನುದಾನವನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಜನರಿಗೆ ಸೌಲಭ್ಯ ಒದಗಿಸಬೇಕಾದ ಹಣ ಅಪರಾತಪರ ಆಗುವುದನ್ನು ಸಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸುನೀಲ ಕಾಂಬ್ಳೆ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೆ ಜಯ ಕರ್ನಾಟಕ ಬದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ.
Discussion about this post