ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇವಿಗೆ ಬಿಡುವ ವಿಚಾರದ ಬಗ್ಗೆ ಗಂಭೀರ ಚಿಂತನೆ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಜಾನುವಾರುಗಳನ್ನು ಅರಣ್ಯ ಪ್ರದೇಶಕ್ಕೆ ಮೇವಿಗೆ ಬಿಡಬಾರದು ಎಂದು ಆದೇಶಿಸಿದ್ದಾರೆ. ಈ ಆದೇಶದ ವಿರುದ್ಧ ಎಲ್ಲಡೆ ಜನಾಕ್ರೋಶವ್ಯಕ್ತವಾಗಿದೆ.
`ಅರಣ್ಯ ಪ್ರದೇಶದಲ್ಲಿ ಜಾನುವಾರುಗಳು ತೆರಳುವುದು ಹಾಗೂ ಅಲ್ಲಿ ಮೇಯಿಸುವುದನ್ನು ಸಂಪೂರ್ಣ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕಾನೂನಾತ್ಮಕ ಅಂಶಗಳೊoದಿಗೆ ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ಗೌಳಿ, ಸಿದ್ದಿ, ಕುಣಬಿ, ಮರಾಠಿ ಮೊದಲಾದ ಒಕ್ಕಲಿಗ ಕುಟುಂಬಗಳು ತಲೆ ತಲಾಂತರದಿoದ ಕಾಡಿನಲ್ಲಿ ದನಕರುಗಳನ್ನು ಮೇಯಿಸುತ್ತಿದ್ದಾರೆ. ಅದರ ಮೇಲೆ ನಿಯಂತ್ರಣ ಅಸಾಧ್ಯ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ. `ಕಾಡು ಪ್ರಾಣಿಗಳು ಊರಿಗೆ ಬರದಂತೆ ತಡೆಯಿರಿ. ಸಾಕು ಪ್ರಾಣಿಗಳು ಕಾಡಿಗೆ ಬರದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸವಾಲು ಹಾಕಿದ್ದಾರೆ. ಜೊತೆಗೆ ಜಾನುವಾರು ಮೀಸಲು ಪ್ರದೇಶವಾಗಿದ್ದ ಗೋಮಾಳಗಳು ಇದೀಗ ಮಾಯವಾದ ಬಗ್ಗೆ ಚರ್ಚೆ ನಡೆದಿದೆ.
ಜಾನುವಾರು ಸಾಕಿದವರು ನಿರ್ಧಿಷ್ಟ ಅರಣ್ಯ ಪ್ರದೇಶದಲ್ಲಿ ಮೇಯಿಸುವ ಹಕ್ಕು ಹೊಂದಿದ್ದಾರೆ. ದೇಶ-ವಿದೇಶದ ನ್ಯಾಯಾಲಯದಲ್ಲಿ ಸಹ ಈ ಬಗ್ಗೆ ಚರ್ಚೆ ನಡೆದಿದ್ದು, ಈ ವಿಷಯ ಮೂಲಭೂತ ಹಕ್ಕುಗಳನ್ನಾಗಿ ಪರಿವರ್ತನೆಯಾಗಿ ದಾಖಲಾಗಿದೆ’ ಎಂದು ರವೀಂದ್ರ ನಾಯ್ಕ ಅವರು ವಿವರಿಸಿದ್ದಾರೆ. ಶೇ 29ರಷ್ಟಿರುವ ಸಂರಕ್ಷಿತ ಅರಣ್ಯಗಳಲ್ಲಿ ಹಾಗೂ ಶೇ 18ರಷ್ಟಿರುವ ವರ್ಗಿಕರಿಸದ ಅರಣ್ಯ ಪ್ರದೇಶಗಳಲ್ಲಿ ಮೇಯಿಸದಕ್ಕೆ ನಿರ್ಭಂಧಿಸುವ ಪೂರ್ಣಪ್ರಮಾಣದ ಅಧಿಕಾರ ಸರ್ಕಾರಕ್ಕೆ ಇಲ್ಲ’ ಎಂದವರು ಮನವರಿಕೆ ಪ್ರಯತ್ನ ಮಾಡಿದ್ದಾರೆ. `ಸರ್ಕಾರದ ನಿಯಮ ಮತ್ತು ಅನುಮತಿ ಪ್ರಕಾರ ಮೇಯಿಸಲು ಅವಕಾಶವಿರುತ್ತದೆ. ಇಂತ ನಿಯಮಗಳ ಅರಣ್ಯ ಸಂರಕ್ಷಣೆ ಮಟ್ಟ ಮತ್ತು ಅರಣ್ಯ ಪ್ರಕಾರದ ಮೇಲೆ ಅವಲಂಬಿತವಾಗಿತ್ತದೆ’ ಎಂದು ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಅರಣ್ಯದಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವ ಅನುಮತಿ ಕಾನೂನಾತ್ಮಕವಾಗಿ ಸಿಗುತ್ತದೆ. ಆದರೆ, ಅದು ಶಾಸನಾನುಸಾರ ನಿಯಮ ಅಡಿಯಲ್ಲಿ ಮಾತ್ರ’ ಎಂದು ಅವರು ತಿಳಿಸಿದ್ದಾರೆ . ಅಲ್ಲದೇ, ಅರಣ್ಯದಲ್ಲಿ ಮೇಯಿಸುವಿಕೆಯ ಕಾನೂನಾತ್ಮಕ ಪರಿಹಾರಕ್ಕೆ ಅರಣ್ಯ ಸಚಿವರು ಅರಣ್ಯ ಪ್ರದೇಶದಲ್ಲಿ ಮೇಯಿಸುವಿಕೆಯ ವಲಯಗಳನ್ನು ಗುರುತಿಸಬೇಕು’ ಎಂದು ರವೀಂದ್ರ ನಾಯ್ಕ ಅವರು ಒತ್ತಾಯಿಸಿದ್ದಾರೆ.
`ಕಾಡಿನಲ್ಲಿ ಜಾನುವಾರು ಮೇಯಿಸಲು ನಿಷೇಧ ವಿಧಿಸುವ ರಾಜ್ಯ ಸರಕಾರದ ನಿರ್ಧಾರ ಅಪಾಯಕಾರಿಯಾಗಿದೆ. ತಲತಲಾಂತರಗಳಿoದ ಕಾಡು ನಂಬಿ ದನಕರು ಸಾಕುತ್ತಿರುವವರಿಗೆ ಈ ಆದೇಶ ಹಾನಿ ಮಾಡಲಿದೆ’ ಎಂದು ರಾಮು ನಾಯ್ಕ ಹೇಳಿದ್ದಾರೆ. `ಕಾಡಿನಲ್ಲಿ ದನಕರುಗಳನ್ನು ಮೇಯಿಸುವುದರಿಂದ ಅರಣ್ಯ ಸಂಪತ್ತಿಗೆ ಹಾನಿಯಾಗುತ್ತದೆ ಎಂಬುದು ನಿಜವಲ್ಲ. ವನ್ಯ ಜೀವಿಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ನಂಬುವ ಹಾಗಿಲ್ಲ. ರೈತರಿಗೂ ಕಾಡಿಗೂ ಅವಿನಾಭಾವ ಸಂಬAಧವಿದೆ. ಅದನ್ನು ಸಚಿವರು ಅರಿಯಬೇಕು’ ಎಂದು ರಾಮು ನಾಯ್ಕ ಹೇಳಿದ್ದಾರೆ. `ರೈತರಿಂದಲೇ ಕಾಡು ಉಳಿದಿದೆ. ಕಾಡು ಪ್ರಾಣಿಗಳು ಉಳಿದಿವೆ’ ಎಂದು ರಾಮು ನಾಯ್ಕ ಅನಿಸಿಕೆವ್ಯಕ್ತಪಡಿಸಿದ್ದಾರೆ.
Discussion about this post