ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ 4,114 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂದೆ. ಜೊತೆಗೆ ಇಲ್ಲಿ 1,400 MW ಸಾಮರ್ಥ್ಯದ 5 ಮತ್ತು 6ನೇ ಘಟಕ ಸ್ಥಾಪಿಸುತ್ತಿದೆ. `ಈ ಘಟಕದಲ್ಲಿನ ಸಿ ಮತ್ತು ಡಿ ದರ್ಜೆ ಉದ್ಯೋಗವನ್ನು ಸ್ಥಳೀಯರಿಗೆ ಒದಗಿಸಬೇಕು’ ಎಂದು ಶಾಸಕ ಸತೀಶ್ ಸೈಲ್ ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಕೇಂದ್ರ ಅಣುಶಕ್ತಿ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಒತ್ತಾಯಿಸಲು ಸತೀಶ್ ಸೈಲ್ ನಿರ್ಧರಿಸಿದ್ದಾರೆ. `ಶೀಘ್ರದಲ್ಲಿ ತಮ್ಮನ್ನು ಭೇಟಿ ಮಾಡಲು ಅನುಕೂಲವಾಗುವಂತೆ ಸಮಯವನ್ನು ನೀಡಿ’ ಎಂದು ರಾಜ್ಯ ಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೇಂದ್ರ ಅಣುಶಕ್ತಿ ಇಲಾಖೆಯ ರಾಜ್ಯ ಸಚಿವರನ್ನು ಕೋರಿದ್ದು `ಈ ತಾವೂ ನಿಯೋಗದೊಂದಿಗೆ ಆಗಮಿಸುವೆ’ ಎಂದು ಸತೀಶ್ ಸೈಲ್ ಹೇಳಿದ್ದಾರೆ.
`ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ ಸ್ಥಳೀಯ ಜನತೆ ತಮ್ಮ ಕೃಷಿ ಭೂಮಿ ಸೇರಿದಂತೆ ಮನೆ ಆಸ್ತಿಪಾಸ್ತಿಗಳನ್ನು ಬಿಟ್ಟುಕೊಟ್ಟು ಸಂತ್ರಸ್ಥರಾಗಿದ್ದಾರೆ. ಅವರಿಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸೂಕ್ತ ಉದ್ಯೋಗವಕಾಶಗಳನ್ನು ನೀಡುವುದರ ಮೂಲಕ ಅವರ ನೆಮ್ಮದಿಯ ಬದುಕಿಗೆ ನೆರವಾಗಬೇಕು’ ಎಂದು ಸತೀಶ ಸೈಲ್ ಆಗ್ರಹಿಸಿದ್ದಾರೆ. `ಸಂತ್ರಸ್ಥರಿಗೆ ಕೈಗಾದಲ್ಲಿ ಉದ್ಯೋಗ ದೊರಕಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವೆ’ ಎಂದು ಹೇಳಿದ್ದಾರೆ.
Discussion about this post