ಮೇಷ ರಾಶಿ: ಸಂದಿಗ್ಧ ಪರಿಸ್ಥಿತಿ ಎದುರಿಸಿದಲ್ಲಿ ಖಿನ್ನತೆಗೆ ಒಳಗಾಗಬೇಡಿ. ಮನಸ್ಥಿತಿ ಬದಲಾಯಿಸು ಧಾರ್ಮಿಕ ಸಮಾರಂಭಗಳಿಗೆ ಹಾಜರಾಗಿ. ಹೊಸ ಆರ್ಥಿಕ ಒಪ್ಪಂದ ಬರಲಿದೆ.
ವೃಷಭ ರಾಶಿ: ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
ಮಿಥುನ ರಾಶಿ: ದೂರದ ಪ್ರಯಾಣ ತಪ್ಪಿಸಲು ಪ್ರಯತ್ನಿಸಿ. ಸಿಗುವ ಹಣವನ್ನು ಹೂಡಿಕೆ ಮಾಡಿ. ಅಧ್ಯಯನದ ನಂತರವೇ ಕಾರ್ಯಸಾಧನೆಗಾಗಿ ಕೆಲಸ ಮಾಡಿ.
ಕರ್ಕಾಟಕ ರಾಶಿ: ಈ ದಿನ ಅಧಿಕ ವಿಶ್ರಾಂತಿ ಅಗತ್ಯ. ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುವವರು ಸಮಯ ಹಾಳುಮಾಡದಿರಿ. ಸಮಯ ಹಾಳು ಮಾಡುವ ಸ್ನೇಹಿತರಿಂದಲೂ ದೂರವಿರಿ. ಮಕ್ಕಳ ಸಾಧನೆಗಳಿಂದ ಪಾಲಕರಿಗೆ ಗೌರವ ಸಿಗುತ್ತದೆ.
ಸಿಂಹ ರಾಶಿ: ದಿನದ ಆರಂಭದಲ್ಲಿ ಆರ್ಥಿಕ ನಷ್ಟವಾಗಬಹುದು. ಇದರಿಂದ ದಿನ ಪೂರ್ತಿ ಬೇಸರ ಸಹಜ. ಆರೋಗ್ಯ ಸುಧಾರಣೆ ಆಗಲಿದೆ.
ಕನ್ಯಾ ರಾಶಿ: ಪರಿಸ್ಥಿತಿಯ ನಿಯಂತ್ರಣ ಹೊಂದುತ್ತಿದ್ದoತೆ ನಿಮ್ಮ ಆತಂಕ ಕಣ್ಮರೆಯಾಗುತ್ತದೆ. ಸರ್ವಾಧಿಕಾರಿ ದೋರಣೆ ನಿಮಗೆ ಶೋಭೆಯಲ್ಲ.
ತುಲಾ ರಾಶಿ: ಯಾವುದೇ ಅಪರಿಚಿತ ವ್ಯಕ್ತಿಯ ಸಲಹೆಯಿಂದ ಹೂಡಿಕೆ ಮಾಡಬೇಡಿ. ಆರೋಗ್ಯ ಸುಧಾರಿಸಿಕೊಳ್ಳಿ. ಅತಿಯಾಗಿ ಯಾರನ್ನು ನಂಬಬೇಡಿ.
ವೃಶ್ಚಿಕ ರಾಶಿ: ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರಬಹುದು. ಆರೋಗ್ಯದ ಕಡೆ ಗಮನಕೊಡಿ. ಹಣ ಹಾಳು ಮಾಡಬೇಡಿ. ಕೆಲಸದಲ್ಲಿ ನಿರಾಸಕ್ತಿ ತೋರಿದರೆ ಅಪಾಯ ಸಾಧ್ಯತೆಯಿದೆ.
ಧನು ರಾಶಿ: ಹಣಕಾಸಿನ ತೊಂದರೆ ಬರಲಿದೆ. ಅಗತ್ಯ ವಸ್ತು ಖರೀದಿಗೆ ಒಳ್ಳೆ ದಿನ. ಮನಸ್ಸಿನ ವಿಷಯಗಳ ಬಗ್ಗೆ ಸೂಕ್ತವಾಗಿ ಯೋಚಿಸಿ. ಗೊಂದಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ.
ಮಕರ ರಾಶಿ: ಧಾರ್ಮಿಕ ಕೆಲಸಗಳಲ್ಲಿ ನಿಮ್ಮ ಸಮಯವನ್ನು ಕಳೆಯಲು ಪ್ರಯತ್ನಿಸಿ. ಈ ಸಮಯದಲ್ಲಿ ಕಾರಣವಿಲ್ಲದ ವಿವಾದ ಬೇಡ. ಯಾರಿಗೂ ಕೂಡ ಸಾಲವನ್ನು ನೀಡಬೇಡಿ.
ಕುಂಬ ರಾಶಿ: ಉಳಿಕೆಯ ಹಣ ಉಪಯೋಗಕ್ಕೆ ಬರಲಿದೆ. ದೊಡ್ಡ ಸಮಸ್ಯೆಯಿಂದ ಹೊರ ಬರುವಿರಿ. ಆರ್ಥಿಕ ವಿಷಯವಾಗಿ ಕುಟುಂಬದಲ್ಲಿ ಗೊಂದಲ ಸಹಜ. ಹಣಕಾಸು ವಿಷಯದಲ್ಲಿ ಕುಟುಂಬದ ಸದಸ್ಯರು ಸ್ಪಷ್ಟವಾಗಿರಲು ಸಲಹೆ ಕೊಡಿ.
ಮೀನ ರಾಶಿ: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಹಣ ಆಗಮನದ ಸಾಧ್ಯತೆಯಿದೆ.
Discussion about this post