ದಿ ಕಾರವಾರ ಅರ್ಬನ್ ಬ್ಯಾಂಕಿಗೆ ಬುಧವಾರ ಸಂಜೆ ಶಾಶ್ವತ ಬೀಗ ಬಿದ್ದಿದೆ. ಬ್ಯಾಂಕನ್ನು ಬಂದ್ ಮಾಡುವಂತೆ ಭಾರತೀಯ ರಿಸರ್ವ ಬ್ಯಾಂಕ್ ಸೂಚನೆ ನೀಡಿದೆ. `ಈ ಬ್ಯಾಂಕಿನ ವ್ಯವಹಾರಗಳು ಸರಿಯಿಲ್ಲ. ಬ್ಯಾಂಕಿನ ಬಳಿ ಬಂಡವಾಳವೂ ಇಲ್ಲ’ ಎಂದು ಆರ್ ಬಿ ಐ ಪ್ರಕಟಿಸಿದೆ.
ದಿ ಕಾರವಾರ ಅರ್ಬನ್ ಬ್ಯಾಂಕಿನ ಪರವಾನಿಗೆಯನ್ನು ಆರ್ ಬಿ ಐ ರದ್ದು ಮಾಡಿದೆ. ಜೊತೆಗೆ ಈ ಬ್ಯಾಂಕ್‌ನ್ನು ಮುಚ್ಚುವ ಆದೇಶ ಹೊರಡಿಸುವಂತೆ ಕರ್ನಾಟಕದ ಸಹಕಾರ ಸಂಘದ ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ. ಬ್ಯಾಂಕಿನಲ್ಲಿ ಯಾವುದೇ ವ್ಯವಹಾರ ನಡೆಯದಂತೆ ನೋಡಿಕೊಳ್ಳುವುದು ಹಾಗೂ ಬ್ಯಾಂಕನ್ನು ಮುಚ್ಚುವ ಪ್ರಕ್ರಿಯೆ ನಡೆಸಲು ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸೂಚಿಸಿದೆ.
ಈ ಬ್ಯಾಂಕಿನಲ್ಲಿ ಕೋಟ್ಯಂತರ ರೂ ಠೇವಣಿ ಇಟ್ಟವರಿಗೂ 5 ಲಕ್ಷ ಖಚಿತ ಹಣ ಸಿಗಲಿದೆ. ವಿಮಾ ಪರಿಹಾರದ ಮೂಲಕ ಆ ಹಣ ಗ್ರಾಹಕರಿಗೆ ಸಿಗಲಿದೆ. ಬ್ಯಾಂಕ್‌ನ ಠೇವಣಿದಾರರ ಪೈಕಿ ಶೇ 92.9ರಷ್ಟು ಮಂದಿ ಶೇ 5 ಲಕ್ಷಕ್ಕಿಂತ ಕಡಿಮೆ ಹಣ ಠೇವಣಿ ಮಾಡಿದ್ದು, ಅವರೆಲ್ಲರೂ ಪೂರ್ಣ ಹಣಪಡೆಯಲು ಅರ್ಹರಿದ್ದಾರೆ. ಆದರೆ, ಇದಕ್ಕೆ ಕಾನೂನು ಹೋರಾಟ ಅನಿವಾರ್ಯ.
Discussion about this post