ಬಡವರಿಗೆ ಉಚಿತ ವೈದ್ಯಕೀಯ ನೆರವು ನೀಡುತ್ತಿರುವ ಕಾರವಾರದ ಡಾ ನಯಿಮ್ ಮುಖಾದಮ್ ಅವರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿದ್ದಾರೆ.
ಡಾ ನಯಿಮ್ ಮುಖಾದಮ್ ಅವರು ಕಾರವಾರದ ಸದಾಶಿವಗಡ ನಿವಾಸಿ. ಕಳೆದ ಮೂರು ದಶಕಗಳಿಂದ ಅವರು ವೈದ್ಯಕೀಯ ಸೇವೆಯಲ್ಲಿದ್ದಾರೆ. ಅವರ ಇಡೀ ಕುಟುಂಬವೇ ವೈದ್ಯಕೀಯ ವೃತ್ತಿಯಲ್ಲಿರುವುದು ಇನ್ನೊಂದು ವಿಶೇಷ. ಬಡವರಿಗೆ ಉಚಿತ ಚಿಕಿತ್ಸೆ ಜೊತೆ ಉಚಿತ ಔಷಧಿಯನ್ನು ಈ ಕುಟುಂಬದವರು ನೀಡುತ್ತ ಬಂದಿದ್ದಾರೆ. ಇದರೊಂದಿಗೆ ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ, ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು ಡಾ ಡಾ ನಯಿಮ್ ಮುಖಾದಮ್ ಅವರ ಕಾಯಕಗಳಲ್ಲಿ ಒಂದಾಗಿದೆ.
ಡಾ ನಯಿಮ್ ಮುಖಾದಮ್ ಅವರ ಸೇವೆ ಗುರುತಿಸಿದ ಕಾರವಾರದ ಲಯನ್ಸ್ ಕ್ಲಬ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ. ಸದಾಶಿವಗಡ ಓಂ ಹೊಟೇಲನಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ಇನಸ್ಟಾಲಿಂಗ್ ಆಫಿಸರ್ ಆಗಿ ಆಗಮಿಸಿದ್ದ ಸಂದೀಪ್ ಅಣ್ವೇಕರ ಅವರು ಪ್ರತಿಜ್ಞಾವಿಧಿ ಬೋಧಿಸಿದರು. `ನಾವೆಲ್ಲರೂ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ನಾಗೇಂದ್ರ ವೇರ್ಣೇಕರ ಮತ್ತು ತಬುಸಮ್ ಮುಖಾದಮ್ ಅವರು ಡಾ ನಯಿಮ್ ಮುಖಾದಮ್ ಅವರಿಗೆ ಶುಭ ಕೋರಿದರು. ಗಣೇಶ ಬಿಷ್ಟಣ್ಣನವರ, ಸೋನಿಯಾ ಅಣ್ವೇಕರ, ಜೆ ಬಿ ತಿಪ್ಪೇಸ್ವಾಮಿ ವಿವಿಧ ಜವಾಬ್ದಾರಿ ನಿಭಾಯಿಸಿದರು.
Discussion about this post