ಮೇಷ ರಾಶಿ: ಮನಸಿನಲ್ಲಿರುವ ಭಯ ದೂರ ಮಾಡಿಕೊಳ್ಳಿ. ಭಾವನೆಗಳನ್ನು ನಿಯಂತ್ರಿಸಿ. ಭಾವನಾತ್ಮಕ ಚಿಂತನೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ವೃಷಭ ರಾಶಿ: ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ವಿಧಾನಗಳಿಗೆ ಹೊಂದಿಕೊಳ್ಳಿ. ನಿಮ್ಮ ಕ್ರಿಯಾಶೀಲತೆ ಆಪ್ತರಿಗೆ ಮೆಚ್ಚುಗೆ ಕೊಡಲಿದೆ. ನಿಮ್ಮ ಶೈಲಿ ಹಾಗೂ ಕೆಲಸ ಮಾಡುವ ವಿಧಾನ ಆಸಕ್ತಿಕರವಾಗಿರಲಿ. ರಾತ್ರಿ ವೇಳೆ ವಾಹನ ಓಡಿಸುವುದು ಅಪಾಯ.
ಮಿಥುನ ರಾಶಿ: ಒತ್ತಡ ನಿವಾರಣೆಗೆ ಉತ್ತಮ ಪುಸ್ತಕ ಓದಿ. ಮಾನಸಿಕವಾಗಿ ದೃಢವಾಗಿರಿ. ವ್ಯಾಯಾಮ ಮಾಡಿ. ಭವಿಷ್ಯದ ದೃಷ್ಠಿಕೋನಕ್ಕಾಗಿ ಹೂಡಿಕೆ ಮಾಡಿ. ಮಹಿಳೆಯರ ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣವಿದೆ.
ಕರ್ಕಾಟಕ ರಾಶಿ: ಹಣ ಆಗಮನ ಸಮಸ್ಯೆಯಿಂದ ದೂರ ಮಾಡಲಿದೆ. ಮಕ್ಕಳ ಬಗ್ಗೆ ಕಠೋರ ನೀತಿ ಬೇಡ. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ. ಅನಗತ್ಯ ಒತ್ತಡ ತಪ್ಪಿಸಿ.
ಸಿಂಹ ರಾಶಿ: ಆರ್ಥಿಕತೆ ಚೇತರಿಕೆ ಆಗಲಿದೆ. ಹಣ ಸಿಗಲಿದೆ. ಕುಟುಂಬಕ್ಕೆ ಸಮಯ ನೀಡಿ. ಅವರ ಆಗು-ಹೋಗುಗಳಿಗೆ ಸ್ಪಂದಿಸಿ.
ಕನ್ಯಾ ರಾಶಿ: ಸುಧಾರಣೆಯ ಯೋಜನೆಗಳು ಉತ್ತಮ ಫಲ ನೀಡುತ್ತದೆ. ನಿಮ್ಮ ಬಗ್ಗೆ ನೀವೇ ಒಳ್ಳೆಯದನ್ನು ಯೋಜಿಸಿ. ಆತ್ಮವಿಶ್ವಾಸಗಳಿಸಿ. ಹೊಸ ಒಪ್ಪಂದಗಳಿಗೆ ಯೋಗ್ಯ ದಿನ.
ತುಲಾ ರಾಶಿ: ಆಪ್ತರ ಜೊತೆ ಜಗಳವಾಗುವ ಸಾಧ್ಯತೆಯಿದೆ. ಹಣವೂ ಖರ್ಚಾಗಲಿದೆ. ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗುವ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳಬೇಡಿ.
ವೃಶ್ಚಿಕ ರಾಶಿ: ಭಾವನೆ ಹಾಗೂ ಉದ್ವೇಗಗಳನ್ನು ಹತೋಡಿಯಲ್ಲಿಡಿ. ಆರೋಗ್ಯದ ವಿಷಯದಲ್ಲಿ ಕಾಳಜಿವಹಿಸಿ. ವಿವಿಧ ಮೂಲಗಳಿಂದ ಹಣಕಾಸು ಲಾಭಗಳು ಸಿಗಲಿದೆ.
ಧನು ರಾಶಿ: ಕುಟುಂಬದವರ ಜೊತೆ ಸರಿಯಾಗಿ ವರ್ತಿಸಿ. ವಿಶೇಷವಾಗಿ ಸಂಗಾತಿ ಜೊತೆ ಚನ್ನಾಗಿರಿ. ವರ್ತನೆ ಸರಿಯಾಗಿರದೇ ಇದ್ದರೆ ಮನೆಯಲ್ಲಿನ ಶಾಂತಿ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಆರ್ಥಿಕ ಲಾಭ ಸಿಗಲಿದೆ.
ಮಕರ ರಾಶಿ: ಪ್ರಖರವಾದ ಮನಸ್ಸಿನಿಂದ ಹೊಸ ವಿಷಯ ಕಲಿಯುವಿರಿ. ಸಾಲ ಕೇಳುವವರು ಹಾಗೂ ಸಾಲ ಹಿಂತಿರುಗಿಸದವರಿಂದ ದೂರವಿರಿ. ಸ್ನೇಹಿತರೇ ಆದರೂ ಈ ದಿನ ಸಾಲ ಕೊಡದಿರುವುದು ಉತ್ತಮ.
ಕುಂಭ ರಾಶಿ: ಯಾವುದೇ ಕಾರಣವಿಲ್ಲದೇ ಕೆಲ ಜನರೊಂದಿಗೆ ಗೊಂದಲಕ್ಕೆ ಕಾರಣರಾಗುತ್ತೀರಿ. ಇದರಿಂದ ನಿಮ್ಮ ಮನಸ್ಥಿತಿಯೂ ಹಾಳಾಗುತ್ತದೆ. ಮಾನಸಿಕ ಕಿರಿಕಿರಿಯಿಂದ ದೂರವಿರಲು ಧ್ಯಾನ ಮಾಡಿ.
ಮೀನ ರಾಶಿ: ಪೋಷಕರ ವಿಶ್ವಾಸ ಹೆಚ್ಚಿಸಿಕೊಳ್ಳಲು ಉತ್ತಮ ದಿನ. ಪ್ರತಿ ವಿಷಯದಲ್ಲಿಯೂ ತಾಳ್ಮೆ ಅಗತ್ಯ. ಅನಗತ್ಯ ಖರ್ಚು ಮಾಡಬೇಡಿ.
Discussion about this post