ಕುಮಟಾ ಕೇಬಲ್ ಕಚೇರಿಯಲ್ಲಿ ಕೆಲಸಕ್ಕಿದ್ದ ಸುಜಾತಾ ನಾಯ್ಕ ಅವರು ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಟ ನಡೆಸಿದ ಅವರ ಪತಿ ರವಿ ನಾಯ್ಕ ಕೊನೆಗೆ ಪೊಲೀಸ್ ದೂರು ನೀಡಿದ್ದಾರೆ.
ಕುಮಟಾ ಹೆಗಡೆಯ ಮಚಗೋಣ ಬಳಿ ರವಿ ನಾಯ್ಕ ಹಾಗೂ ಸುಜಾತಾ ನಾಯ್ಕ ವಾಸವಾಗಿದ್ದರು. ರವಿ ನಾಯ್ಕ ಅವರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಸುಜಾತಾ ನಾಯ್ಕ ಅವರು ತರಂಗ ಎಲೆಕ್ಟಾನಿಕ್ಸ್ ಎದುರಿನ ವೆಂಕಟ್ರಮಣ ಪಂಡೀತ ಅವರ ಕೇಬಲ್ ಕಚೇರಿಯಲ್ಲಿ ಕೆಲಸಕ್ಕಿದ್ದರು.
ಜುಲೈ 15ರಂದು ಕಚೇರಿಗೆ ಹೋಗಿ ಬರುವುದಾಗಿ ಸುಜಾತಾ ನಾಯ್ಕ ಅವರು ಹೊರಟರು. ಪ್ರತಿ ದಿನ ಸಂಜೆ ಮನೆಗೆ ಮರಳುತ್ತದ್ದ ಅವರು ಆ ದಿನ ಬರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸುಜಾತಾ ನಾಯ್ಕ ಅವರ ಸುಳಿವು ಸಿಗಲಿಲ್ಲ. ಹೀಗಾಗಿ ಕುಮಟಾ ಪೊಲೀಸ್ ಠಾಣೆಗೆ ಆಗಮಿಸಿದ ರವಿ ನಾಯ್ಕ ಅವರು ಪತ್ನಿ ಕಾಣೆಯಾದ ಬಗ್ಗೆ ದೂರಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಜಾತಾ ನಾಯ್ಕ ಅವರ ಹುಡುಕಾಟ ನಡೆಸಿದ್ದಾರೆ.
Discussion about this post