ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಉಂಚಳ್ಳಿ ಜಲಪಾತಕ್ಕೆ ತೆರಳುವ ರಸ್ತೆ ಅಂಚಿನಲ್ಲಿ ಭೂ ಕುಸಿತವಾಗಿದೆ. ಕಾನಸೂರು ಹಾಗೂ ಹೇರೂರು ಹೆಗ್ಗರಣೆ ಸಂಪರ್ಕಿಸುವ ಸೊಂಗೆಮನೆ ಉಂಚಳ್ಳಿ ಫಾಲ್ಸ್ ಮುಖ್ಯರಸ್ತೆ ಹೊಸ್ನಪ್ಪದ ಬಳಿ ಕುಸಿದಿದೆ.
ರಸ್ತೆ ಅಂಚಿನಲ್ಲಿ ಭಾರೀ ಪ್ರಮಾಣದ ಕಂದಕ ಬಿದ್ದಿದೆ. ರಸ್ತೆ ಸಹ ಅಲ್ಪ ಪ್ರಮಾಣದಲ್ಲಿ ಕುಗ್ಗಿದ್ದು, ಕುಸಿಯುವ ಲಕ್ಷಣ ಹೆಚ್ಚಾಗಿದೆ. ರಸ್ತೆ ಕುಸಿದರೆ ಈ ಭಾಗದ ಸಂಚಾರ ಸ್ಥಗಿತವಾಗಲಿದೆ. ಸ್ಥಳೀಯರಿಗೆ ಸಹ ಬೇರೆ ಸಂಚಾರಕ್ಕೆ ಬೇರೆ ರಸ್ತೆ ಇಲ್ಲದಿರುವುದು ಇಲ್ಲಿನ ದೊಡ್ಡ ಸಮಸ್ಯೆ.
ರಸ್ತೆ ಸಂಚಾರ ಸ್ಥಗಿತಗೊಂಡರೆ ಕಾನಸೂರು, ಕೋಡ್ಕರ, ಶಿರಸಿ, ಯಡಳ್ಳಿ ಭಾಗದ ಜನ ಸಂಪರ್ಕ ಕಳೆದುಕೊಳ್ಳುತ್ತಾರೆ. ಶಾಲೆ-ಕಾಲೇಜು ಮಕ್ಕಳು ಸಮಸ್ಯೆ ಅನುಭವಿಸುತ್ತಾರೆ. ಜೊತೆಗೆ ಪ್ರವಾಸಿಗರು ಸಹ ಅರ್ದ ದಾರಿಗೆ ಬಂದು ಮರಳುವುದು ಅನಿವಾರ್ಯವಾಗಲಿದೆ. ರಸ್ತೆ ಕುಸಿತದ ಬಗ್ಗೆ ಅರಿವಿದ್ದರೂ ಲೋಕೋಪಯೋಗಿ ಇಲಾಖೆ ಮುನ್ನಚ್ಚರಿಕೆ ಕ್ರಮವಹಿಸಿಲ್ಲ. ಸೂಚನಾ ಫಲಕ ಸಹ ಅಳವಡಿಸಿಲ್ಲ.
Discussion about this post