ಮೇಷ ರಾಶಿ: ಕೆಲವರ ಅಸೂಯದ ವರ್ತನೆಯಿಂದ ನಿಮಗೆ ಕಿರಿಕಿರಿ ಆಗಬಹುದು. ಅದರಿಂದ ತಾಳ್ಮೆ ಕಳೆದುಕೊಳ್ಳುವುದು ಬೇಡ. ಪರಿಸ್ಥಿತಿ ನಿಯಂತ್ರಣ ತಪ್ಪಿದರೂ ಶಾಂತವಾಗಿರುವುದು ಉತ್ತಮ. ಮಕ್ಕಳಿಗೆ ಒಳಿತಾಗಲಿದೆ.
ವೃಷಭ ರಾಶಿ: ನಿಮ್ಮ ವೈವಾಹಕ ಜೀವನ ಅದ್ಬುತವಾಗಿದೆ. ಸಾಲಪಡೆದವರಿಂದ ಮರುಪಾವತಿ ಸಾಧ್ಯ. ಆರೋಗ್ಯ ಎಂದಿನoತೆ ಇರಲಿದೆ.
ಮಿಥುನ ರಾಶಿ: ಭೂಮಿ, ವಸತಿ ಅಥವಾ ಸಾಂಸ್ಕೃತಿಕ ಯೋಜನೆಗಳ ಬಗ್ಗೆ ಗಮನಹರಿಸಿ. ನಿಮ್ಮ ಖುಷಿಯ ಸ್ವಭಾವ ಬೇರೆಯವರಿಗೂ ಖುಷಿ ಕೊಡಲಿದೆ. ನಿಮ್ಮ ವಿಚಾರಗಳು ಉತ್ತಮವಾಗಿರಲಿದೆ. ನಿರೀಕ್ಷೆ ಮೀರಿ ಆದಾಯ ಬರಲಿದೆ.
ಕರ್ಕಾಟಕ ರಾಶಿ: ಸ್ವಂತ ಪ್ರಯತ್ನದಿಂದ ಆದಾಯ ಸೃಷ್ಠಿ ಸಾಧ್ಯ. ನಿಮ್ಮ ಮೇಲೆ ನಿಮಗೆ ನಂಬಿಗೆ ಅಗತ್ಯ.
ಸಿಂಹ ರಾಶಿ: ಹೂಡಿಕೆದಾರರಿಗೆ ನಷ್ಟ ಸಾಧ್ಯತೆ. ಸ್ನೇಹಿತರ ಜೊತೆ ಅಪರಿಚಿತರ ಬಗ್ಗೆಯೂ ಎಚ್ಚರಿಕೆ ಅಗತ್ಯ. ಭಾವನೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಉತ್ತಮ.
ಕನ್ಯಾ ರಾಶಿ: ಅನಗತ್ಯ ಹಣ ವೆಚ್ಚ ಮಾಡುವವರಿಗೆ ಈ ದಿನ ಅರಿವು ಮೂಡಲಿದೆ. ರಹಸ್ಯ ವಿಷಯಗಳನ್ನು ನಿಮ್ಮಲ್ಲಿಯೇ ಇರಿಸಿಕೊಳ್ಳಿ. ಅನಗತ್ಯ ಅನುಮಾನ ಸಂಬAಧ ಹಾಳು ಮಾಡುವ ಸಾಧ್ಯತೆಯಿದೆ.
ತುಲಾ ರಾಶಿ: ನಿರ್ಣಯಕೈಗೊಳ್ಳುವ ಮುನ್ನ ಮಾನಸಿಕ ಸ್ಪಷ್ಟತೆ ಅಗತ್ಯ. ಆಪ್ತರು ಹಾಗೂ ಸಂಬAಧಿಕರ ಜೊತೆ ವ್ಯಾಪಾರ ಮಾಡುವ ಜನ ಎಚ್ಚರದ ಹೆಜ್ಜೆಯಿಡಿ. ತುಂಬಾ ಯೋಜಿಸಿ ನಿರ್ಣಯ ಮಾಡದಿದ್ದರೆ ಆರ್ಥಿಕ ನಷ್ಟ ಸಾಧ್ಯತೆ ಹೆಚ್ಚಿದೆ.
ವೃಶ್ಚಿಕ ರಾಶಿ: ದಿನವಿಡೀ ಚೈತನ್ಯದಿಂದ ಕೂಡಿರುತ್ತದೆ. ಅನಿರೀಕ್ಷಿತ ಲಾಭದ ನಿರೀಕ್ಷೆ. ಅತಿಥಿಗಳ ಜೊತೆ ಒರಟಾಗಿ ನಡೆದುಕೊಳ್ಳಬೇಡಿ. ಒರಟಾದ ವರ್ತನೆ ಕುಟುಂಬದ ಅಸಮಧಾನಕ್ಕೆ ಕಾರಣ. ಜೊತೆಗೆ ಸಂಬoಧದಲ್ಲಿಯೂ ಶೂನ್ಯತೆ ತರಬಹುದು.
ಧನು ರಾಶಿ: ನಿಮ್ಮ ಬಗ್ಗೆ ನಿಮಗೆ ಕಾಳಜಿಯಿರಲಿ. ಸಮಯಕ್ಕೆ ಬೆಲೆ ಕೊಡದಿದ್ದರೆ ನಿಮಗೆ ಹಾನಿ ಖಚಿತ.
ಮಕರ ರಾಶಿ: ಪ್ರತಿಭೆಯನ್ನು ಸರಿಯಾಗಿ ಬಳಸಿದರೆ ಅದು ಲಾಭದಾಯಕ ಎಂಬ ಅರಿವಾಗಲಿದೆ. ಕೆಲಸ ಮಾಡುವ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯ ಪೂರೈಸಲು ಆಗದಿರಬಹುದು. ಇದರಿಂದ ಕೌಟುಂಬಿಕ ಕಲಹದ ಲಕ್ಷಣಗಳಿವೆ.
ಕುಂಭ ರಾಶಿ: ವಿವಿಧ ಮೂಲಗಳಿಂದ ಹಣ ಬರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ದೂರ ಪ್ರಯಾಣ ಒಳಿತಲ್ಲ. ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.
ಮೀನ ರಾಶಿ: ಸಾಧ್ಯವಿರುವುದಕ್ಕಿಂತ ಹೆಚ್ಚಿನ ಕೆಲಸ ಒಪ್ಪಿಕೊಳ್ಳಬೇಡಿ. ಇತರರನ್ನು ಸಂತೋಷಪಡಿಸಲು ನಿಮ್ಮ ಮೇಲೆ ನೀವೇ ಒತ್ತಡ ಹಾಕಬೇಡಿ. ಮನೆ ಕುರಿತಾದ ಹೂಡಿಕೆಯಿಂದ ಲಾಭ ಸಾಧ್ಯ.
Discussion about this post