ಶಿರಸಿಯ ಜೀವನ ಶೇಟ್ ಅವರ ಚಿನ್ನದ ಅಂಗಡಿಗೆ ನುಗ್ಗಿ ಅಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮೂವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆ ಡಕಾಯಿತರಿಂದ ಒಟ್ಟು 2.23 ಲಕ್ಷ ರೂ ಮೌಲ್ಯದ ಆಭರಣಗಳನ್ನು ಜಪ್ತು ಮಾಡಿಕೊಂಡಿದ್ದಾರೆ.
ಶಿರಸಿ ದಾಸನಕೊಪ್ಪದಲ್ಲಿ ಜೀವನ ಶೇಟ್ ಅವರು ಚಿನ್ನದ ಕೆಲಸ ಮಾಡಿಕೊಂಡಿದ್ದರು. ಜೀವನ ಶೇಟ್ ಅವರ ಮಾವ ದತ್ತಾತ್ರೇಯ ಶೇಟ್ ಅವರ ಮನೆಗೆ ನುಗ್ಗಿದ ಕಳ್ಳರು ಅಲ್ಲಿಂದ ಜೀವನ ಶೇಟ್ ಅವರ ಮಳಿಗೆ ಒಳಗೆ ಪ್ರವೇಶಿಸಿದ್ದರು. 2025ರ ಜುಲೈ 12ರಂದು ಅಂಗಡಿಯಲ್ಲಿದ್ದ ಆಭರಣ ಕಳ್ಳತನ ನಡೆದ ಬಗ್ಗೆ ಜೀವನ ಶೇಟ್ ಅವರು ಪೊಲೀಸ್ ದೂರು ನೀಡಿದ್ದರು.
ಪ್ರಕರಣದ ಬೆನ್ನತ್ತಿದ ಪೊಲೀಸರು ವಿಶೇಷ ತಂಡ ರಚಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ, ಶಿರಸಿ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ, ಪಿಐ ಶಶಿಕಾಂತ ವರ್ಮಾ ಸೇರಿ ಕಳ್ಳರ ಪತ್ತೆಗೆ ವಿವಿಧ ಆಯಾಮಗಳಿಂದ ಚಿಂತಿಸಿದರು. ಪಿಎಸ್‌ಐ ಮಹಾತಪ್ಪ ಕುಂಬಾರ ಹಾಗೂ ಸುನಿಲಕುಮಾರ ಕಾಂಬ್ಳೆ ಅವರ ಜೊತೆ ಪೊಲೀಸ್ ಸಿಬ್ಬಂದಿ ಅಬ್ದುಲ ಅನ್ಸಾರಿ, ಕುಮಾರ ಬಣಗಾರ, ಬಸವರಾಜ ಜಾಡರ್, ಮಂಜಪ್ಪ ಪಿ, ರಾಜೇಶ ಪಿ ಎಂ
ದಿವಾನ ಅಲಿ, ಮಹಾದೇವ ವಾಲಿಕಾರ, ರೇವಪ್ಪ ಬಂಕಾಪುರ ಹಾಗೂ ಉದಯ ಗುನಗಾ ಕಾರ್ಯಾಚರಣೆಗಿಳಿದರು.
ವಿವಿಧ ತಂತ್ರಜ್ಞಾನ ಹಾಗೂ ಸಾಕ್ಷಿ ಸಂಗ್ರಹದ ಆಧಾರದ ಮೇರೆಗೆ ಭಟ್ಕಳ ಮೂಲದ ಇಮ್ರಾನ್ ಇಕ್ಕೇರಿ, ಇಮ್ರಾನ್ ರಮಣದಾರ್ ಹಾಗೂ ಅಮೀರ್ ಬ್ಯಾರಿ ಎಂಬಾತರನ್ನು ವಶಕ್ಕೆಪಡೆದವರು. ಆ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಜೀವನ ಶೇಟ್ ಅವರ ಅಂಗಡಿಯಲ್ಲಿ ಕಾಣೆಯಾಗಿದ್ದ ದೇವರ ಮೂರ್ತಿ, ಬೆಳ್ಳಿ ಆಭರಣ, ಉಂಗುರಗಳು ಸಿಕ್ಕವು. ಆ ಮೂವರನ್ನು ಬಂಧಿಸಿ 223500ರೂ ಮೌಲ್ಯದ ಆಭರಣಗಳನ್ನು ಪೊಲೀಸರು ಜಪ್ತು ಮಾಡಿದರು.
Discussion about this post