ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್’ನ ಸಭೆ ಭಾನುವಾರ ದಾಂಡೇಲಿಯಲ್ಲಿ ನಡೆದಿದ್ದು, ಸಂಘಟನೆಗೆ ಹೊಸ ಪದಾಧಿಕಾರಿಗಳ ನೇಮಕ ನಡೆದಿದೆ.
ಈ ಸಂಘಟನೆಯ ನೂತನ ಅಧ್ಯಕ್ಷರಾಗಿ ಕೃಷ್ಣ ಭಟ್ಟ ಹಾಗೂ ಉಪಾಧ್ಯಕ್ಷರಾಗಿ ಶಾಂತರಾಮ ನಾಯಕ, ಪ್ರಭಾಕರ್ ಅಮ್ಟೆಕರ್ ಹಾಗೂ ಹನುಮಂತ್ ಸಿಂದೋಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ತಿಲಕ ಗೌಡ, ಸಹ ಕಾರ್ಯದರ್ಶಿಯಾಗಿ ಜ್ಯೋತಿ ನಾರ್ವೇಕರ್, ಭೀಮಣ್ಣ ಬೋವಿ ಹಾಗೂ ಕೊಸಾಂವ್ ಡಿಸೋಜ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಖಜಾಂಚಿಯಾಗಿ ತಿಮ್ಮಪ್ಪ ಗೌಡ ಜವಾಬ್ದಾರಿವಹಿಸಿಕೊಂಡಿದ್ದು, 14 ಜನ ಸಮಿತಿ ಸದಸ್ಯರು ಈ ಸಂಘಟನೆಗೆ ಬೆನ್ನೆಲುಬಾಗಿರಲಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಉತ್ತರ ಕನ್ನಡ ಜಿಲ್ಲೆಯ 4ನೇ ಸಮ್ಮೇಳನವನ್ನು ಭಾನುವಾರ ದಾಂಡೇಲಿಯಲ್ಲಿ ನಡೆಸಲಾಗಿದೆ. 100ಕ್ಕೂ ಅಧಿಕ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಕಟ್ಟಡ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಸಮ್ಮೇಳನ ಉದ್ಘಾಟಿಸಿದರು. `ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಜಾರಿ ಮಾಡಲು ಕಾರ್ಮಿಕ ಇಲಾಖೆ ಕೆಲಸ ಮಾಡಬೇಕು. ಕಾರ್ಮಿಕರಿಗೆ ಶೈಕ್ಷಣಿಕ ಸೌಲಭ್ಯ, ಮದುವೆ, ಹೆರಿಗೆ, ಆರೋಗ್ಯ, ಪಿಂಚಣಿ ಸೌಲಭ್ಯ ಸರಿಯಾಗಿ ಸಿಗಬೇಕು’ ಎಂದವರು ಆಗ್ರಹಿಸಿದರು. `ಸಿಐಟಿಯು ನೇತ್ರತ್ವದಲ್ಲಿ ಎಲ್ಲಾ ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸಿ’ ಎಂದು ಕರೆ ನೀಡಿದರು.
ಪ್ರಮುಖರಾದ ಶಾಂತರಾಮ ನಾಯಕ, ತಿಲಕ ಗೌಡ, ಸಲೀಮ್ ಸಯ್ಯದ್, ಶಿರಸಿಯ ನಾಗಪ್ಪ ನಾಯ್ಕ, ಮುಂಡಗೋಡಿನ ಭೀಮಣ್ಣ ಭೋವಿ, ಹಳಿಯಾಳದ ಜಯಶ್ರೀ ಹಿರೇಕರ್, ರಾಮನಗರದ ಜ್ಯೋತಿ ನಾರ್ವೇಕರ್, ಜೊಯಿಡಾದ ಪ್ರೇಮಾನಂದ್ ವೇಳಿಪ್ ಕೃಷ್ಣ ಭಟ್, ಜಯಶ್ರೀ ಹಿರೇಕರ ಇತರರು ಭಾಗವಹಿಸಿ ತಮ್ಮ ಜವಾಬ್ದಾರಿ ನಿಭಾಯಿಸಿದರು.
Discussion about this post