ಕಾರವಾರದ ರಾಕ್ ಗಾರ್ಡನ್ ಬಳಿ ಸ್ಕೂಟಿಯಿಂದ ಬಿದ್ದು ರುಕ್ಸಿನಾ ಸಯ್ಯದ್ ಸಾವನಪ್ಪಿದ್ದಾರೆ. ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ.
ಕಾರವಾರದ ಪಂಚರಿಶಿವಾಡದಲ್ಲಿ ರುಕ್ಸಿನಾ ಸಯ್ಯದ್ (30) ಅವರು ವಾಸವಾಗಿದ್ದರು. ಜುಲೈ 20ರಂದು ಪಾತಿಮಾ ಸಯ್ಯದ್ (18) ಕೂರಿಸಿಕೊಂಡು ಅದೇ ಭಾಗದ ವಿದ್ಯಾರ್ಥಿನಿ ಪಾತಿಮಾ (18) ಅವರ ಜೊತೆ ಸ್ಕೂಟಿಯಲ್ಲಿ ಹೊರಟಿದ್ದರು. ರಾಕ್ ಗಾರ್ಡನ್ ಬಳಿ ಸ್ಕೂಟಿ ನಿಯಂತ್ರಣ ತಪ್ಪಿತು. ಪರಿಣಾಮ ಸ್ಕೂಟಿ ಹೆದ್ದಾರಿ ಡಿವೈಡರ್’ಗೆ ಗುದ್ದಿದ್ದು, ಸ್ಕೂಟಿಯಲ್ಲಿದ್ದ ಇಬ್ಬರು ಗಾಯಗೊಂಡರು.
ಆ ಪೈಕಿ ರುಕ್ಸಿನಾ ಸಯ್ಯದ್ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಗೋವಾದ ಬಾಂಬೋಲಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು.
Discussion about this post