ಗೋಕರ್ಣದ ಮುಖ್ಯ ಕಡಲತೀರದ ಬಳಿಯ ರಾಮ ಮಂದಿರ ಹಿಂದೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಲ್ಲಿಂದ ಮಣಿನಾಗಕ್ಕೆ ತೆರಳುವ ಕಾಲು ದಾರಿ ಕಣ್ಮರೆಯಾಗುವ ಲಕ್ಷಣಗಳಿವೆ.
ಕಳೆದ ವರ್ಷ ಇಲ್ಲಿ ಭೂ ಕುಸಿತ ಉಂಟಾಗಿತ್ತು. ಇದೀಗ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಧರೆ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷ ದೊಡ್ಡ ಬಂಡೆ-ಕಲ್ಲುಗಳು ಇಲ್ಲಿ ಉರುಳಿದ್ದವು. ಮಂದಿರದ ಮೇಲ್ಚಾವಣಿಗೆ ಹಾನಿಯಾಗಿತ್ತು. ಜೊತೆಗೆ ರಾಮತೀರ್ಥದ ಚಿಕ್ಕ ಕಟ್ಟಡಕ್ಕೂ ಧಕ್ಕೆಯಾಗಿತ್ತು.
ಈ ಬಾರಿ ಅದೇ ಗುಡ್ಡದ ಇನ್ನೊಂದು ಬದಿಯಲ್ಲಿ ಕೊರೆತ ಶುರುವಾಗಿದೆ. 10 ಮೀ ಪ್ರದೇಶಕ್ಕೂ ಅಧಿಕ ದೂರದಲ್ಲಿ ಭೂಮಿ ಬಾಯ್ತೆರೆದಿದೆ. ಕಳೆದ ವರ್ಷ ಸಣ್ಣ ಪ್ರಮಾಣದಲ್ಲಿ ಗೋಚರಿಸಿದ್ದ ಬಿರುಕು ಇದೀಗ ದೊಡ್ಡದಾಗಿದ್ದು, ಧರೆ ಕುಸಿದಲ್ಲಿ ಮಣ್ಣು ಸಮುದ್ರ ಸೇರುವ ಸಾಧ್ಯತೆ ಅಧಿಕವಿದೆ.
ಈ ಭೂಮಿ ಮೇಲ್ಪಾಗ ವಿಶಾಲವಾದ ಬಯಲಿದ್ದು, ಅಲ್ಲಿ ಕೆಲ ಹೊಟೇಲ್-ರೆಸಾರ್ಟಗಳಿವೆ. ವಸತಿ ಪ್ರದೇಶದ ಮಣ್ಣು ಸಡಲಿಕೆಯಿಂದ ಅಲ್ಲಿನ ಕಟ್ಟಡಗಳಿಗೆ ಹಾನಿ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ.
Discussion about this post