`ಕಾರವಾರ ಜಿಲ್ಲಾಸ್ಪತ್ರೆ ವೈದ್ಯ ಡಾ ಶಿವಾನಂದ ಕುಡ್ತಾಳಕರ್ ಲಂಚ ಸ್ವೀಕರಿಸುವಾಗ ಅತ್ಯಂತ ಲವಲವಿಕೆಯಿಂದಿದ್ದು, ಜೈಲು ಸೇರಿದ ನಂತರ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದು ಹೇಗೆ ಸಾಧ್ಯ?’ ಎಂದು ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಪ್ರಶ್ನಿಸಿದ್ದಾರೆ.
`ಲೋಕಾಯುಕ್ತ ದಾಳಿ ನಂತರ ಶಿವಾನಂದ ಕುಡ್ತಳಕರ್ ಅವರು ಜೈಲು ಸೇರಬೇಕಿತ್ತು. ಆದರೆ, ಅನಾರೋಗ್ಯದ ನೆಪದಲ್ಲಿ ಅವರು ಆಸ್ಪತ್ರೆ ಸೇರಿದ್ದಾರೆ. ಮೊದಲು ಕಿಮ್ಸ್ ಆಸ್ಪತ್ರೆ ಸೇರಿದ ಅವರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರವಾಗಿದ್ದಾರೆ. ತಮಗೆ ಶ್ವಾಸಕೋಶ, ಚರ್ಮರೋಗ ಮತ್ತು ಅಸ್ತಮಾ ಇರುವುದಾಗಿ ಅವರು ಹೇಳಿಕೊಂಡಿದ್ದು, ಇಂಥ ಅನಾರೋಗ್ಯಪೀಡಿತ ವ್ಯಕ್ತಿಯನ್ನು ಹೇಗೆ ಕ್ರಿಮ್ಸ್ ಅಧೀಕ್ಷಕರನ್ನಾಗಿ ಮಾಡಲಾಗಿದೆ?’ ಎಂದು ಪ್ರಶ್ನಿಸಿದರು.
`ಕಳೆದ 12 ವರ್ಷಗಳಿಂದ ಡಾ ಶಿವಾನಂದ ಕುಡ್ತಳಕರ್ ಭ್ರಷ್ಟಾಚಾರದಲ್ಲಿ ನಿರತರಾಗಿದ್ದರು. ಅವರು ಪ್ರಭಾವಿಯಾಗಿದ್ದ ಕಾರಣ ಯಾರೂ ದುರು ಕೊಟ್ಟಿರಲಿಲ್ಲ. ಹಾಸಿಕೆ ಪೂರೈಕೆ ವಿಷಯದಲ್ಲಿ 3 ಲಕ್ಷ ರೂ ಲಂಚ ಬೇಡಿದ್ದ ಅವರು ಹಣಪಡೆಯುವಾಗಲೇ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದು, ಅವರನ್ನು ಸೇವೆಯಿಂದಲೇ ವಜಾ ಮಾಡಬೇಕು’ ಎಂದು ಆಗ್ರಹಿಸಿದರು. `ಸಿಕ್ಕಿಬಿದ್ದ ನಂತರವೂ ಶಿವಾನಂದ ಕುಡ್ತಳಕರ್ ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ಗೀತಾ ಭಾನಾವಳಿಕರ್ ಸೇರಿ ಅನೇಕರು ಡಾ ಶಿವಾನಂದ ಕುಡ್ತಳಕರ್ ಅವರ ಬೇಜವಬ್ದಾರಿಯಿಂದ ಸಾವನಪ್ಪಿದ್ದಾರೆ. ಈ ಬಗ್ಗೆ ದಾಖಲೆ ನೀಡಿದರೂ ಪ್ರಭಾವಿಗಳ ಒತ್ತಡದಿಂದ ಅವರು ಬಚಾವಾಗಿದ್ದರು’ ಎಂದು ರಾಘು ನಾಯ್ಕ ದೂರಿದರು.
`ಶಿವಾನಂದ ಕುಡ್ತಳಕರ್ ಅವರು 70 ಕೋಟಿ ರೂ ಅಕ್ರಮ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ಐಟಿ ತೆರಿಗೆ ಇಲಾಖೆಗೂ ದೂರು ನೀಡಲಾಗುತ್ತದೆ. ರೋಗಪೀಡಿತ ವೈದ್ಯನಿಂದ ಗರ್ಭಿಣಿ-ಮಹಿಳೆಯರಿಗೆ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಡಾ ಶಿವನಾಂದ ಕುಡ್ತಳಕರ್ ಅವರ ಪರವಾನಿಗೆ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು. ಪ್ರಮುಖರಾದ ಎಚ್ ಎಫ್ ದೊಡ್ಡಣ್ಣವರ, ಸಂದೀಪ ನಾಯ್ಕ, ಚಂದ್ರಕಾoತ ನಾಯ್ಕ, ಸಂತೋಷ ಬಾಂದೇಕರ್, ಕಾಶಿ ಮತ್ತು ಶಂಕರ ಗುನಗಿ ಸಹ ಶಿವಾನಂದ ಕುಡ್ತಳಕರ್ ವಿರುದ್ಧ ಆಕ್ರೋಶಹೊರಹಾಕಿದರು.
Discussion about this post