ಭಾರೀ ಪ್ರಮಾಣದ ಗಾಳಿ ಮಳೆಗೆ ಯಲ್ಲಾಪುರದ ಬಾಗಿನಕಟ್ಟಾದಲ್ಲಿ ವ್ಯಕ್ತಿಯೊಬ್ಬರ ಮೈಮೇಲೆ ಮರ ಮುರಿದು ಬಿದ್ದಿದೆ. ಭಾನುವಾರ ತಡರಾತ್ರಿ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಯನ್ನು ಅಲ್ಲಿನ ವೈದ್ಯರು ಬೆಳಗ್ಗೆಯವರೆಗೂ ಆರೈಕೆ ಮಾಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕಳುಹಿಸಿದ್ದಾರೆ.
ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯಿತು. ಅದರ ಪರಿಣಾಮ ಬಾಗಿನಕಟ್ಟಾದ ಬಳಿ ಭಾರೀ ಗಾತ್ರದ ಮರವೊಂದು ಮುರಿದು ಬಿದ್ದಿತು. ಆ ಮರ ಅಲ್ಲಿನ ಪರಶುರಾಮ ದೆವಳಿ ಅವರ ಮೈಮೇಲೆ ಬಿದ್ದಿದ್ದರಿಂದ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಬಲಭುಜದ ಕೀಲು ಸಂದಿ ಸ್ಥಾನಪಲ್ಲಟವಾಗಿದ್ದರಿಂದ ಪರಶುರಾಮ ದೇವಳಿ ಅವರು ಸರ್ಕಾರಿ ಆಸ್ಪತ್ರೆಗೆ ಬಂದರು.
ತಪಾಸಣೆ ನಡೆಸಿದಾಗ ಅವರ ದೇಹದಲ್ಲಿನ ಮೂಳೆಗಳು ಮುರಿದಿರುವುದು ವೈದ್ಯರ ಗಮನಕ್ಕೆ ಬಂದಿತು. ರಾತ್ರಿ ಬಂದ ರೋಗಿಗೆ ಬೆಳಗಿನವರೆಗೂ ಅಲ್ಲಿನ ವೈದ್ಯರು ಆರೈಕೆ ಮಾಡಿದರು. ತುರ್ತು ಚಿಕಿತ್ಸೆ ನೀಡಿ ಅವರು ಸುಧಾರಿಸಿಕೊಳ್ಳುವಂತೆ ನೋಡಿಕೊಂಡರು. ರಾತ್ರಿ ಆಸ್ಪತ್ರೆಯಲ್ಲಿಯೇ ಆಶ್ರಯ ಕಲ್ಪಿಸಿದ್ದು, ಸೋಮವಾರ ಬೆಳಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕಿಮ್ಸ್’ಗೆ ಫೋನ್ ಮಾಡಿದರು.
ಅದಾದ ನಂತರ ಪರಶುರಾಮ ದೇವಳಿ ಅವರನ್ನು ಯಲ್ಲಾಪುರದಿಂದ ಕಾರವಾರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಕಾರವಾರದ ವೈದ್ಯಕೀಯ ವಿಜ್ಞಾನ ಕಾಲೇಜಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಪಡೆಯತ್ತಿದ್ದಾರೆ.
Discussion about this post