ಸಿದ್ದಾಪುರದ ತ್ಯಾಗಲಿ ಬಳಿಯ ಕಲಗದ್ದೆಯಲ್ಲಿ ಗಾಳಿ-ಮಳೆಗೆ ಸಿಲುಕಿ ಮನೆ ಕಳೆದುಕೊಂಡಿದ್ದ ನರಸಿಂಹ ಆಚಾರಿ ಅವರಿಗೆ ಪುನೀತ್‌ರಾಜಕುಮಾರ ಆಶ್ರಯಧಾಮದವರು ಆಶ್ರಯ ನೀಡಿದ್ದಾರೆ. ಈ ವಿಷಯ ಅರಿತು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಆಶ್ರಮಕ್ಕೆ ನೆರವು ನೀಡಿದ್ದಾರೆ.
ಮನೆ ಕಳೆದುಕೊಂಡ ನರಸಿಂಹ ಆಚಾರಿ ಅವರು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿದ್ದರು. ಅವರ ಮನೆ ಮುರಿದು ಬಿದ್ದಿದ್ದರಿಂದ ಮಳೆಯಿಂದ ರಕ್ಷಣೆಪಡೆಯಲು ಬೇರೆ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಿಕ್ಕಿದ್ದು, ಸ್ಥಳೀಯ ಗ್ರಾ ಪಂ ಅಧಿಕಾರಿಗಳ ಜೊತೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದರು. ಮಣ್ಣಿನ ಮನೆ ಕುಸಿತದಿಂದ ಕಂಗಾಲಾಗಿದ್ದ ನರಸಿಂಹ ಆಚಾರಿ ಅವರನ್ನು ಅಧಿಕಾರಿಗಳು ರಕ್ಷಿಸಿದರು.
ಅದಾದ ನಂತರ ಕಂದಾಯ ಅಧಿಕಾರಿಗಳು ನರಸಿಂಹ ಆಚಾರಿ ಅವರನ್ನು ಆಶ್ರಯಧಾಮಕ್ಕೆ ಕಳುಹಿಸಿದರು. ತಾತ್ಕಾಲಿಕವಾಗಿ ನರಸಿಂಗ ಆಚಾರಿ ಅವರಿಗೆ ಆಶ್ರಯ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದು, ಆಶ್ರಯಧಾಮದ ನಾಗಾರಾಜ ನಾಯ್ಕ ಅವರು ಒಪ್ಪಿದರು. ಈ ವಿಷಯ ಅರಿತ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆಶ್ರಯಧಾಮಕ್ಕೆ ನೆರವು ನೀಡಿದರು.
Discussion about this post