ಮೇಷ ರಾಶಿ: ಉದ್ದಿಮೆಯಲ್ಲಿನ ಯಶಸ್ಸು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹಣದ ಪ್ರಯೋಜನ ಸಿಗಲಿದೆ. ಕೋಪ ಸ್ವಭಾವದಿಂದ ಹಣ ವೆಚ್ಚವಾಗುವ ಸ್ಥಿತಿ ಬರಬಹುದು. ನಿಮ್ಮ ರಹಸ್ಯಗಳನ್ನು ಬೇರೆಯವರಿಗೆ ಹೇಳಬೇಡಿ.
ವೃಷಭ ರಾಶಿ: ಭೂಮಿ, ವಸತಿ ಅಥವಾ ಸಾಂಸ್ಕೃತಿಕ ಯೋಜನೆಯ ಸಮಸ್ಯೆಗಳ ಬಗ್ಗೆ ಗಮನಕೊಡಿ. ಹೊಸ ಕೆಲಸ ಶುರು ಮಾಡುವ ಮುನ್ನ ಅನುಭವಿಗಳ ಸಲಹೆಪಡೆಯುವುದು ಸೂಕ್ತ.
ಮಿಥುನ ರಾಶಿ: ಆರೋಗ್ಯ ಸುಧಾರಣೆ ಜೊತೆ ಆರ್ಥಿಕ ಲಾಭ ಸಿಗಲಿದೆ. ಹೂಡಿಕೆಗೆ ಉತ್ತಮ ದಿನ. ಯೋಚಿಸಿ ಒಳ್ಳೆಯ ಕಡೆ ಹೂಡಿಕೆ ಮಾಡಿ.
ಕರ್ಕಾಟಕ ರಾಶಿ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶಕ್ತಿಯ ಮಟ್ಟ ಹೆಚ್ಚಾಗಲಿದೆ. ನಿಮ್ಮ ಊಹೆಗಳು ಫಲಿಸುತ್ತದೆ. ಊಹೆಗಳು ಲಾಭವನ್ನು ನೀಡುತ್ತದೆ.
ಸಿಂಹ ರಾಶಿ: ದಿನವೀಡಿ ಚೈತನ್ಯದಿಂದ ಕೂಡಿರುತ್ತದೆ. ಅನಿರೀಕ್ಷಿತ ಲಾಭ ನಿರೀಕ್ಷೆಯಿದೆ. ಹೊಸ ಉದ್ದಿಮೆಗಳು ಆಕರ್ಷಕವಾಗಿರುತ್ತದೆ. ಆದಾಯದ ಭರವಸೆಯೂ ಸಾಧ್ಯವಿದೆ.
ಕನ್ಯಾ ರಾಶಿ: ಖರ್ಚು ವೆಚ್ಚ ನಿಯಂತ್ರಿಸಲು ಅಗತ್ಯವಾದದನ್ನು ಮಾತ್ರ ಖರೀದಿಸಿ. ಸಣ್ಣ ಪ್ರಮಾಣದ ಪ್ರವಾಸದಿಂದ ಒತ್ತಡ ದೂರವಾಗಲಿದೆ. ಕೆಲಸದಲ್ಲಿ ಬದ್ಧತೆ ಪ್ರದರ್ಶಿಸಿದಲ್ಲಿ ಲಾಭ ಸಾಧ್ಯ.
ತುಲಾ ರಾಶಿ: ದಿನದ ಆರಂಭದಲ್ಲಿ ಆರ್ಥಿಕ ನಷ್ಟ ಸಾಧ್ಯತೆಯಿದೆ. ಇದರಿಂದ ದಿನಪೂರ್ತಿ ಬೇಸರವಾಗಿರಬಹುದು. ಆರೋಗ್ಯದಲ್ಲಿ ಚೇತರಿಕೆ ಆಗಲಿದೆ.
ವೃಶ್ಚಿಕ ರಾಶಿ: ಕಚೇರಿಯಲ್ಲಿ ಉತ್ತಮ ಫಲಿತಾಂಶ ಸಿಗುವುದಿಲ್ಲ. ಈ ದಿನ ನಿಮಗೆ ದ್ರೋಹವಾಗಬಹುದು. ದೂರದ ಸಂಬAಧಿಕರು ದಿಢೀರ್ ಆಗಿ ಬರುವ ಲಕ್ಷಣಗಳಿವೆ.
ಧನು ರಾಶಿ: ಸಾಮಾನ್ಯ ಜ್ಞಾನದ ಜೊತೆ ನಿರಂತರ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ತಾಳ್ಮೆಯಿಂದ ಕಾಯುವುದು ಮುಖ್ಯ. ಸಣ್ಣ ಉದ್ಯೋಗ ಮಾಡುವ ಜನರು ಆಪ್ತರ ಸಲಗೆಪಡೆದು ಮುನ್ನಡೆಯುವುದು ಸೂಕ್ತ. ಸಲಹೆಪಡೆದರೆ ಆರ್ಥಿಲ ಸಹಾಯ ಸಾಧ್ಯವಿದೆ.
ಮಕರ ರಾಶಿ: ಬಹುಕಾಲದ ಜೀವನ ಒತ್ತಡ ಶಮನವಾಗಲಿದೆ. ಒತ್ತಡದಿಂದ ಶಾಶ್ವತವಾಗಿ ಹೊರಬರಲು ಜೀವನಶೈಲಿ ಬದಲಾವಣೆ ಅಗತ್ಯ. ಜೀವನಶೈಲಿ ಸುಧಾರಣೆಗೆ ಇದುವೇ ಸೂಕ್ತ ಸಮಯ. ಪೋಷಕರ ನೆರವಿನಿಂದ ಹಣಕಾಸು ಸಮಸ್ಯೆ ದೂರವಾಗಲಿದೆ.
ಕುಂಭ ರಾಶಿ: ಉನ್ನತ ಮಟ್ಟದಲ್ಲಿ ಕೆಲಸ ಮಾಡುವವರಿಂದ ಕೆಳ ಕೆಲಸಗಾರರಿಗೆ ತೊಂದರೆ ಆಗಲಿದೆ. ತೊಂದರೆ ಆದರೂ ಶಾಂತಿಯಿAದ ವರ್ತಿಸಬೇಕು. ಮನೆ ಸದಸ್ಯರ ಜೊತೆ ಮಾತನಾಡುವಾಗಲೂ ಕೋಪ ಬೇಡ. ಕೋಪದಲ್ಲಿ ಆಡಿದ ಮಾತು ಮನಸ್ಥಾಪಕ್ಕೆ ಕಾರಣವಾಗಲಿದೆ. ನಂತರ ಮನವರಿಕೆ ಮಾಡುವುದು ಕಷ್ಟ.
ಮೀನ ರಾಶಿ: ಕಚೇರಿ ಕೆಲಸ ಸರಿಯಾಗಿ ಆಗುವುದಿಲ್ಲ. ಇದರಿಂದ ದಿನಪೂರ್ತಿ ತೊಂದರೆಯಾಗಬಹುದು. ನಂಬಿಕೆ ದ್ರೋಹವಾಗುವ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಸಂಜೆ ಸಮಯ ಹಾಳಾಗುವ ಲಕ್ಷಣಗಳಿವೆ.
Discussion about this post