ಉತ್ತರ ಕನ್ನಡ ಜಿಲ್ಲೆಯ ಪರಮೇಶ್ವರ ಹೆಗಡೆ ಅವರು ಆಕಾಶವಾಣಿ ಗುರುತಿಸುವ ಸರ್ವ ಶ್ರೇಷ್ಠ ರಾಷ್ಟ್ರೀಯ ಮನ್ನಣೆಯಾದ `ಏ ಟಾಪ್’ ಗೌರವಕ್ಕೆ ಪಾತ್ರರಾಗಿದ್ದಾರೆ.
ಪರಮೇಶ್ವರ ಹೆಗಡೆ ಅವರು ಹೊನ್ನಾವರದ ಕಲಭಾಗದವರು. ತಂದೆಯೇ ಅವರಿಗೆ ಮೊದಲ ಗುರು. ಬಾಲ್ಯದಿಂದಲೂ ಗಾಯನದ ಬಗ್ಗೆ ಅಪಾರ ಆಸಕ್ತಿಹೊಂದಿದ್ದ ಅವರು ದೇಶದ ನಾನಾ ಭಾಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಅವರ ಈ ಸಾಧನೆಯನ್ನು ಇದೀಗ ಆಕಾಶವಾಣಿ ಗುರುತಿಸಿ ಗೌರವಿಸಿದೆ.
ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಪರಮೇಶ್ವರ ಹೆಗಡೆ ಅವರ ಅಧ್ಯಯನ ನಿರಂತರ. `ಸ್ವರ ಸಾಧ್ಯತೆ ಹಾಗೂ ರಾಗ ವಿನ್ಯಾಸಗಳ ಶೋಧ ಪ್ರವೃತ್ತಿ ಅವರ ಕಾಯಕ. ಪ್ರತಿ ಸ್ವರವನ್ನು ಹೃದಯಕ್ಕೆ ಮುಟ್ಟಿಸುವ ಹಾಗೆ ಹಾಡುವ ಚಿಂತನೆ ಅವರದ್ದು. ಸ್ವರಗಳ ಭಾವ ಪ್ರಧಾನತೆಯನ್ನು ಹಾಗೂ ರಾಗಗಳ ಆಶಯಗಳನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುವ ಕಲೆಯಿಂದ ಪರಮೇಶ್ವರ ಹೆಗಡೆ ಅವರು ಪ್ರಸಿದ್ಧಿಪಡೆದಿದ್ದಾರೆ.
`ಆಕಾಶವಾಣಿ ನೀಡಿದ ಮನ್ನಣೆ ತಮ್ಮ ಜೀವನಕ್ಕೆ ಸಿಕ್ಕ ಬಹುದೊಡ್ಡ ಗೌರವ’ ಎಂದು ಪರಮೇಶ್ವರ ಹೆಗಡೆ ಅವರು ಪ್ರತಿಕ್ರಿಯಿಸಿದರು. ಸಂಗೀತ ಸಾಧನೆಗೆ ಅಡಿಪಾಯವಾಗಿದ್ದ ಎಸ್ ಎಂ ಭಟ್ಟ ಕಟ್ಟಿಗೆ, ಧಾರವಾಡದ ಹಿರಿಯ ಕಲಾವಿದರಾಗಿದ್ದ ಚಂದ್ರಶೇಖರ್ ಪುರಾಣಿಕಮಠ ಹಾಗೂ ನೆಚ್ಚಿನ ಗುರು ಬಸವರಾಜ ರಾಜಗುರು ಅವರನ್ನು ಈ ವೇಳೆ ಪರಮೇಶ್ವರ ಹೆಗಡೆ ಅವರು ಸ್ಮರಿಸಿದರು.
Discussion about this post