ಮನೆ ಬಳಿ ಬಂದಿದ್ದ ನಾಗರವನ್ನು ಉರಗ ತಜ್ಞರು ಕಾಡಿನ ಬಳಿ ಬಿಟ್ಟರು. ಆದರೆ, ಆ ಹಾವು ಅಲ್ಲಿನ ದೇವರಿಗೆ ಮೂರು ಪ್ರದಕ್ಷಿಣೆ ಹಾಕದೇ ಕಾಡಿಗೆ ಹೋಗಲು ಒಪ್ಪಲಿಲ್ಲ!
ಕುಮಟಾದ ಕೋಡ್ಕಣಿ ಐಗಳಕೂರ್ವೆಯ ರಮೇಶ ಭಂಡಾರಿ ಅವರ ಮನೆ ಬಳಿ ನಾಗರ ಪಂಚಮಿ ದಿನವಾದ ಮಂಗಳವಾರ ನಾಗರ ಹಾವು ಕಾಣಿಸಿತು. ನಾಗ ದೇವರಿಗೆ ಕೈ ಮುಗಿದ ಕುಟುಂಬದವರು ಉರಗ ತಜ್ಞ ಪವನ ನಾಯ್ಕ ಅವರಿಗೆ ಫೋನ್ ಮಾಡಿದರು. ಆ ನಾಗರ ಹಾವನ್ನು ಪವನ್ ನಾಯ್ಕ ಅವರು ಉಪಾಯವಾಗಿ ಸೆರೆ ಹಿಡಿದರು. ಅದಾದ ನಂತರ ಹಾವನ್ನು ಅವರು ನಾಗರ ಹಾಗೂ ಜಟಕ ದೇವರ ಬಳಿಯಿರುವ ಕಾಡಿಗೆ ಬಿಟ್ಟು ಬಂದರು.
ಪವನ್ ನಾಯ್ಕ ಅವರನ್ನು ಬೆನ್ನಟ್ಟಿ ಬಂದ ಆ ಹಾವು ಕೆಲವೇ ನಿಮಿಷದಲ್ಲಿ ಮತ್ತೆ ಊರು ಪ್ರವೇಶಿಸಿತು. ನಾಗದೇವರ ಗುಡಿಯ ಬಳಿ ತೆರಳಿ ಅಲ್ಲಿ ಸ್ಥಾಪಿಸಲಾಗಿದ್ದ ದೇವರಿಗೆ ಪ್ರದಕ್ಷಿಣೆ ಹಾಕಿತು. ನೇರವಾಗಿ ಜಟಕ ದೇವಾಲಯದ ಒಳಗೆ ಪ್ರವೇಶಿಸಿದ ಹಾವು ನೋಡಿ ಊರಿನವರು ಅಚ್ಚರಿವ್ಯಕ್ತಪಡಿಸಿದರು. ದೇವರ ಸುತ್ತ ಮೂರು ಪ್ರದಕ್ಷಿಣೆ ಹಾಕಿದ ಹಾವು ನಂತರ ಜನರ ಕಾಲುಗಳ ಬಳಿ ನಿಧಾನವಾಗಿ ತೆರಳಿತು. ಆಗ ಅಲ್ಲಿದ್ದ ಎಲ್ಲರೂ ಭಕ್ತಿಯಿಂದ ಕೈ ಮುಗಿದಿದ್ದು, ಅದಾದ ನಂತರ ಆ ಹಾವು ಕಾಡು ಸೇರಿತು.
Discussion about this post