ಮೇಷ ರಾಶಿ: ಶ್ರಮ ಮತ್ತು ಸೂಕ್ತ ಪ್ರಯತ್ನಗಳು ಒಳ್ಳೆಯ ಫಲಿತಾಂಶದ ಜೊತೆ ಪ್ರತಿಫಲವನ್ನು ನೀಡುತ್ತದೆ. ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯಿರಿ.
ವೃಷಭ ರಾಶಿ: ವ್ಯಾಯಾಮದ ಜೊತೆ ದಿನ ಶುರು ಮಾಡಿ. ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವಿರಲಿ. ನಿಮ್ಮ ದಿನಚರಿ ಸಕಾರಾತ್ಮಕವಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ.
ಮಿಥುನ ರಾಶಿ: ಪ್ರೀತಿಪಾತ್ರರ ಜೊತೆ ಸಿಹಿ ತಿನಿಸು ಹಂಚುಕೊಳ್ಳುವ ಸಂಗತಿ ಬರಲಿದೆ. ಕೆಲಸದಲ್ಲಿಯೂ ನಿಮಗೆ ಪ್ರೀತಿ-ಬೆಂಬಲ ಸಿಗಲಿದೆ.
ಕರ್ಕ ರಾಶಿ: ಪ್ರಯಾಣದಲ್ಲಿರುವಾಗ ಅಮೂಲ್ಯವಾದ ವಸ್ತುಗಳ ಬಗ್ಗೆ ಕಾಳಜಿವಹಿಸಿ. ನಿಮ್ಮ ಸರಕು ಕಳ್ಳರ ಪಾಲಾಗುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರಿಂದ ನಿರಾಸೆಯಾಗಲಿದೆ.
ಸಿಂಹ ರಾಶಿ: ಶ್ರೇಷ್ಠ ಜನರ ಜೊತೆ ನಿಮ್ಮ ಸಂಬoಧ ಹಾಗೂ ಒಳ್ಳೆಯ ವಿಚಾರ ಚರ್ಚೆಯಾಗಲಿದೆ. ಮನೆಗೆ ಸಂಬoಧಿಕರ ಆಗಮನವಾಗಲಿದೆ.
ಕನ್ಯಾ ರಾಶಿ: ಈ ದಿನ ವಿಶ್ರಾಂತಿ ಅಗತ್ಯ. ತಿಳಿದ ಜನರ ಮೂಲಕ ಆದಾಯದ ದಾರಿ ಸಿಗಲಿದೆ. ಸಂಬAಧಗಳನ್ನು ಗಟ್ಟಿಯಾಗಿರಿಸಿಕೊಳ್ಳಲು ಉತ್ತಮ ದಿನ. ಆಸಕ್ತಿದಾಯಕ ವ್ಯಕ್ತಿಯ ಭೇಟಿ ಆಗಲಿದೆ.
ತುಲಾ ರಾಶಿ: ಪ್ರಭಾವಿಗಳ ಬೆಂಬಲದಿAದ ನಿಮ್ಮ ನೈತಿಕ ಉತ್ಸಾಹ ಹೆಚ್ಚಾಗಲಿದೆ. ಉಳಿತಾಯದ ಹಣ ಉಪಯೋಗಕ್ಕೆ ಬರಲಿದೆ.
ವೃಶ್ಚಿಕ ರಾಶಿ: ಪ್ರೀತಿಯ ವ್ಯವಹಾರದಲ್ಲಿ ಬಲವಂತ ಬೇಡ. ಕೆಲಸದಲ್ಲಿ ಪ್ರದೇಶದಲ್ಲಿ ಉತ್ತಮ ಅನುಭವ ಸಿಗಲಿದೆ. ಸಹೋದ್ಯೋಗಿಗಳಿಂದ ಕೆಲಸದ ಬಗ್ಗೆ ಮೆಚ್ಚುಗೆ ಸಿಗಲಿದೆ.
ಧನು ರಾಶಿ: ಧ್ಯಾನದ ಜೊತೆ ದಿನ ಶುರು ಮಾಡಿ. ಧ್ಯಾನ ನಿಮ್ಮ ಮನಸ್ಸಿಗೆ ನೆಮ್ಮದಿ ಜೊತೆ ಆರೋಗ್ಯ ನೀಡುತ್ತದೆ. ದಿನವಿಡೀ ಶಕ್ತಿಯುತವಾಗಿರಲು ಯೋಗವೂ ಸಹಕಾರಿ. ಕುಟುಂಬ ಸದಸ್ಯರ ಜೊತೆ ಸುತ್ತಾಟ ಸಾಧ್ಯತೆಯಿದೆ.
ಮಕರ ರಾಶಿ: ಆಸಕ್ತರಿಗೆ ಹೊರದೇಶ ಪ್ರವಾಸಕ್ಕೆ ಅವಕಾಶ ಸಿಗಲಿದೆ. ಅನಿರೀಕ್ಷಿತ ಪ್ರಯಾಣದ ಒತ್ತಡವೂ ಬರಲಿದೆ. ಉದ್ವೇಗ ಹೆಚ್ಚಾಗಲಿದೆ. ಸಂಬAಧಿಕರಿAದ ಸಂಗಾತಿ ಜೊತೆ ವಾದ-ವಾಗ್ವಾದ ಆಗಬಹುದು.
ಕುಂಭ ರಾಶಿ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹಿರಿಯರ ಸಲಹೆ ಗಂಭೀರವಾಗಿ ಪರಿಗಣಿಸಿ. ಆರ್ಥಿಕ ಸಲಹೆಗಳು ನಿಮಗೆ ಉನ್ನತ ಸ್ಥಾನ ನೀಡಲಿದೆ.
ಮೀನ ರಾಶಿ: ಪ್ರೀತಿಪಾತ್ರರ ಪ್ರಶಂಸೆ ಹಾಗೂ ಪಾರಿತೋಷಕಗಳು ರೋಮಾಂಚನಕಾರಿಯಾಗಿರುತ್ತದೆ. ಕೆಲಸ ಮಾಡುವ ಬಗ್ಗೆ ಖಚಿತತೆ ಇಲ್ಲದಿದ್ದರೆ ಭರವಸೆ ನೀಡಬೇಡಿ.
Discussion about this post