ಸತ್ಯ ಸಾಯಿಬಾಬಾ ಅವರ 100ನೇ ಜನ್ಮದಿನದ ಅಂಗವಾಗಿ ಕುಮಟಾದ ಕೋಡಕಣಿಯಲ್ಲಿ ಸಮಾಜ ಸೇವೆ, ಶಿಕ್ಷಣ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕಾರ್ಯಕ್ರಮ ನಡೆದಿದೆ. ಸತ್ಯ ಸಾಯಿ ಸೇವಾ ಸಮಿತಿ ಸದಸ್ಯರು ಶಾಲಾ ಮಕ್ಕಳ ಅನುಕೂಲಕ್ಕಾಗಿ ಬ್ಯಾಗ್ ವಿತರಿಸಿದ್ದು, ಅದಾದ ನಂತರ ಸುತ್ತಲಿನ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದಾರೆ.
ಇಲ್ಲಿನ ಬಾಲವಿಕಾಸ ಹಾಗೂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್ ವಿತರಣೆ ನಡೆಯಿತು. ಅದಾದ ನಂತರ ಪ್ರೇಮತರು ಅಭಿಯಾನದ ಅಂಗವಾಗಿ ಗಿಡಗಳನ್ನು ನಾಟಿ ಮಾಡಿ ಪರಿಸರ ಸಂರಕ್ಷಣೆ ಸಂದೇಶ ಸಾರಲಾಯಿತು. `ಸತ್ಯ ಸಾಯಿಬಾಬಾ ಅವರು ಶಿಕ್ಷಣ ಹಾಗೂ ಆರೋಗ್ಯ ವಿಷಯವಾಗಿ ಅನೇಕ ಸಮಾಜಮುಖಿ ಕಾರ್ಯ ನಡೆಸಿದ್ದಾರೆ. ಅದನ್ನು ಮಾದರಿಯನ್ನಾಗಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದ ಜೊತೆ ಶಿಕ್ಷಣಪಡೆಯಬೇಕು’ ಎಂದು ಉತ್ತರ ಕನ್ನಡ ಜಿಲ್ಲೆಯ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ರಾಮದಾಸ್ ಆಚಾರಿ ಕರೆ ನೀಡಿದರು.
ಸತ್ಯಸಾಯಿ ಸೇವಾ ಸಂಸ್ಥೆಗಳ ಸೇವಾ ಸಂಯೋಜಕ ವಿನಾಯಕ ಪಟಗಾರ ಅವರು `ಕೋಡಕಣಿ ಸತ್ಯಸಾಯಿ ಸೇವಾ ಸಮಿತಿಯ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿಯಾದೆ’ ಎಂದರು. ಸಮಿತಿಯ ಹಿರಿಯ ಸದಸ್ಯರಾದ ಗಣಪತಿ ಪಟಗಾರ, ಲೋಹಿತ್ ಪಟಗಾರ, ರಾಜೇಶ ಪಟಗಾರ ಇತರರು ವಿವಿಧ ಜವಾಬ್ದಾರಿ ನಿಭಾಯಿಸಿದರು.
Discussion about this post