ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಮುಂಡಗೋಡು ಪಿಐ ರಂಗನಾಥ ನೀಲಮ್ಮನವರ್ ಹಾಗೂ ಪಿಎಸ್‌ಐ ಪರಶುರಾಮ ಮಿರ್ಜಗಿ ಕಾನೂನು ಅಸ್ತ್ರ ಪ್ರಯೋಗಿಸಿದ್ದಾರೆ. ಒಂದೇ ದಿನ ಎರಡು ಕಡೆ ದಾಳಿ ನಡೆಸಿದ ಈ ಪೊಲೀಸರು ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಲೈ 29ರಂದು ಮುಂಡಗೋಡಿನ ಗಣೇಶಪುರ ಬಳಿಯ ಆಂಜಿನೇಯ ದೇವಾಲಯದ ಹತ್ತಿರ ಆರು ಜನ ಅಂದರ್ ಬಾಹರ್ ಆಡುತ್ತಿದ್ದರು. ಈ ವಿಷಯ ಅರಿತ ಪಿಐ ರಮೇಶ ಹಾನಾಪುರ ತಮ್ಮ ತಂಡದ ಜೊತೆ ಅಲ್ಲಿ ತೆರಳಿದರು. ಪೊಲೀಸರನ್ನು ನೋಡಿದ ಗಣೇಶನಗರದ ಮಂಜುನಾಥ ಮಣಾಬಾಯಿ ಅಲ್ಲಿಂದ ಓಡಿ ಪರಾರಿಯಾದರು.
ಅದೇ ಊರಿನ ರಮೇಶ ಮೂಲಿಮನಿ, ಮಹಾಂತೇಶ ಕುಂಕೂರು, ರಿಯಾಜ ಚಿಕ್ಕೇರಿ, ಪಕ್ಕೀರಪ್ಪ ಮೂಲಿಮನಿ ಹಾಗೂ ಶರೀಫ ಹಾನಗಲ್ ಪೊಲೀಸರಿಗೆ ಶರಣಾದರು. ಅವರ ಬಳಿಯಿದ್ದ 1925ರೂ ಹಣದ ಜೊತೆ ಇಸ್ಪಿಟ್ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆಪಡೆದರು.
ಮುಂಡಗೋಡು ಓಣಿಕೇರಿ ಪಶು ಚಿಕಿತ್ಸಾಲಯ ಎದುರಿನ ಅಂಗನವಾಡಿ ಬಳಿ ಕೆಲವರು ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಪಿಎಸ್‌ಐ ಪರಶುರಾಮ ಮಿರ್ಜಗಿ ಅವರಿಗೆ ಫೋನ್ ಬಂದಿತು. ಅವರು ಅಲ್ಲಿ ಸಿಬ್ಬಂದಿ ಜೊತೆ ಹೋದಾಗ ಓಣಿಕೇರಿಯ ಬಸವನಗೌಡ ಪಾಟೀಲ, ಸಂತೋಷ ಬಾಳಬಿಂಡ ಹಾಗೂ ಅನುರಾಜ ಅಕ್ಕಸಾಲಿ ಹಣ ಕಟ್ಟಿ ಇಸ್ಪಿಟ್ ಆಡುತ್ತಿರುವುದು ಕಾಣಿಸಿತು. ಆಗಲೂ, ಪೊಲೀಸರನ್ನು ನೋಡಿದ ಓಣಿಕೇರಿಯ ಗೌಸ್ ಮುನಿಯಾರ್, ರಾಜಸಾಬ ಚಿನ್ನಳ್ಳಿ, ರವಿ ತೋಟದ, ಹುಸನಸಾಬ ಸವಣೂರ, ರಾಘು ಕೋಣನಕೇರಿ ಹಾಗೂ ಪ್ರವೀಣ ನೇಗುಣಿ ಓಡಿ ಪರಾರಿಯಾದರು.
ಸಿಕ್ಕಿಬಿದ್ದ ಮೂವರನ್ನು ವಶಕ್ಕೆಪಡೆದ ಪೊಲೀಸರು ಅವರ ಬಳಿಯಿದ್ದ 2025ರೂ ಹಣ ಜಪ್ತು ಮಾಡಿದರು. ಉಳಿದ ಸಾಮಗ್ರಿಗಳನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
Discussion about this post