ಕರಾವಳಿಯಲ್ಲಿ ಹಾದು ಹೋದ ರಾಷ್ಟಿಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ. ಜಾನುವಾರುಗಳು ಅಪಘಾತದಲ್ಲಿ ಸಾವನಪ್ಪುವ ಪ್ರಮಾಣವೂ ಹೆಚ್ಚಾಗಿದೆ. ಬುಧವಾರ ಸಹ ಮಿರ್ಜಾನ್ ಬಳಿ ದನವೊಂದು ಹೆದ್ದಾರಿ ಮದ್ಯೆ ಸಾವನಪ್ಪಿದ್ದು, ಇನ್ನಷ್ಟು ಅಪಘಾತಗಳಿಗೆ ಕಾರಣವಾಗುತ್ತಿದ್ದ ಕಳೆಬರಹವನ್ನು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ರಸ್ತೆ ಬದಿಗೆ ಸರಿಸಿದರು.
ಅದಾದ ನಂತರ ಹೆದ್ದಾರಿ ನಿರ್ವಹಣೆ ನೋಡಿಕೊಳ್ಳುವ ಐ ಆರ್ ಬಿ ಕಂಪನಿಯ ತುರ್ತು ಸಹಾಯವಾಣಿಗೆ ಆಗ್ನೇಲ್ ರೊಡ್ರಿಗ್ರಿಸ್ ಅವರು ಫೋನ್ ಮಾಡಿದರು. 1033ಗೆ ಫೋನ್ ಮಾಡಿದಾಗ ಆ ಸಂಖ್ಯೆ ಅಸ್ತಿತ್ವದಲ್ಲಿರಲಿಲ್ಲ. ಹೀಗಾಗಿ ಮಿರ್ಜಾನ್ ಪಿಡಿಓ ಅಮೃತ್ ಭಟ್ಟ ಅವರನ್ನು ಭೇಟಿಯಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಐ ಆರ್ ಬಿ ಕಂಪನಿ ಮ್ಯಾನೇಜರ್ ಮಲ್ಲಿಕಾರ್ಜುನ ಅವರಿಗೆ ಫೋನ್ ಮಾಡಿದರು.
`ರಸ್ತೆಯಲ್ಲಿ ಸಾವನಪ್ಪಿದ ದನದಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಅದನ್ನು ಕೂಡಲೇ ದಫನ್ ಮಾಡಿ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಸೂಚಿಸಿದರು. `ಜಾನುವಾರುಗಳನ್ನು ರಸ್ತೆಗೆ ಬಿಡುವ ಮಾಲಕರ ಮೇಲೆಯೂ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಗೋಹತ್ಯೆ ವಿಷಯವಾಗಿ ಹೋರಾಟ ನಡೆಸುವವರು ಬೀಡಾಡಿ ಜಾನುವಾರುಗಳ ಬಗ್ಗೆಯೂ ಕಾಳಜಿವಹಿಸಬೇಕು’ ಎಂದು ಅಲ್ಲಿನ ವಿಷ್ಣು ಭಂಡಾರಿ ಅವರು ಅನಿಸಿಕೆವ್ಯಕ್ತಪಡಿಸಿದರು.
Discussion about this post