ಕಾರವಾರದ ಮುದಗಾದಲ್ಲಿರುವ ಜನತಾ ವಿದ್ಯಾಲಯದ ಸುತ್ತಲು ರೋಟರಿ ಕ್ಲಬ್ಬಿನವರು ತೆಂಗಿನ ಗಿಡ ನಾಟಿ ಮಾಡಿದ್ದಾರೆ. ರೋಟರಿ ಕ್ಲಬ್ ಸದಸ್ಯ ಪ್ರಶಾಂತ್ ಕೋಡಾರ್ಕರ್ ಅವರು ತಮ್ಮ ತಾಯಿ ಹೆಸರಿನಲ್ಲಿ ಶಾಲೆಗೆ 50 ಗಿಡ ಕೊಟ್ಟಿದ್ದು, ರೋಟರಿ ಅಧ್ಯಕ್ಷ ಅರ್ಜುನ ಉಪಾಧ್ಯಾಯ ಅವರು ಅದನ್ನು ನಾಟಿ ಮಾಡಿದರು.
`ಎದೆಗೆ ಬಿದ್ದ ಅಕ್ಷರ ಹಾಗೂ ಭೂಮಿಗೆ ಬಿದ್ದ ಬೀಜ ಎಂದಿಗೂ ನಷ್ಟವಲ್ಲ. ಹೀಗಾಗಿ ಅಕ್ಷರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರತಿ ವರ್ಷ ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು’ ಎಂದು ರೋಟರಿ ಅಧ್ಯಕ್ಷ ಅರ್ಜುನ ಉಪಾಧ್ಯಾಯ ಅವರು ಈ ವೇಳೆ ಕರೆ ನೀಡಿದರು.
`ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಅಗತ್ಯ. ವಿದ್ಯಾರ್ಥಿಗಳ ಜೊತೆ ಪಾಲಕರು ಗಿಡ ನೆಡುವ ಅಭಿಯಾನಕ್ಕೆ ಕೈ ಜೋಡಿಸಬೇಕು’ ಎಂದು ಶಾಲಾ ಮುಖ್ಯಾಧ್ಯಾಪಕಿ ವೀಣಾ ಮಾಡಿಗೇರ್ ಮನವಿ ಮಾಡಿದರು. ರೋಟರಿ ಕಾರ್ಯದರ್ಶಿ ವಿನೋದ್ ಕೋಟರ್ಕರ್, ನಿಯೋಜಿತ ಅಧ್ಯಕ್ಷರಾದ ಗುರುದತ್ ಬಂಟ, ರೋಟರಿ ಸದಸ್ಯರಾದ ಸಾತಪ್ಪ ದಾಂಡೇಲ, ಮೋಹನ ನಾಯಕ, ಗುರುರಾಜ್ ಭಟ್, ಕೃಷ್ಣ ಕೇಳಸ್ಕರ್, ರಾಘವೇಂದ್ರ ಪ್ರಭು, ಅಮರನಾಥ ಶೆಟ್ಟಿ, ಪ್ರಸನ್ನ ತೆಂಡೂಲ್ಕರ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮಾಕಾಂತ ಹರಿಕಂತ್ರ, ನಾರಾಯಣ ಕಾರ್ವಿ ಗಿಡ ನೆಡುವ ಕಾರ್ಯದಲ್ಲಿ ಕೈ ಜೋಡಿಸಿದರು.
ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಕುರಿತು ರಸಪ್ರಶ್ನೆಯೂ ನಡೆದಿದ್ದು, ಇದೇ ವೇಳೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಜೈ ರಂಗನಾಥ ಬಿ ಎಸ್, ಸ್ಮಿತಾ ನಾಯ್ಕ, ನಿಖಿತಾ ನಾಯ್ಕ, ವಿಠಲ ಗಡ್, ನಾಗರಾಜ ಗೌಡ ಇತರರು ತಮ್ಮ ಜವಾಬ್ದಾರಿ ನಿಭಾಯಿಸಿದರು.
Discussion about this post