ಸಿದ್ದಾಪುರ ತಾಲೂಕಿನ ಹಲವು ಕಡೆ ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಅಭಾವ ಎದುರಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಪ ಪಂ ಸದಸ್ಯ ನಂದನ ಬೋರಕರ್ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದಾರೆ.
`ಮಳೆಗಾಲದಲ್ಲಿಯೂ ನೀರಿಗೆ ಅಭಾವ ಎದುರಾಗಿರುವುದನ್ನು ಹೇಳಲು ಮುಜುಗರವಾಗುತ್ತದೆ. ಪಟ್ಟಣ ಪಂಚಾಯತ ಜನರ ಸಮಸ್ಯೆಗೆ ಸ್ಪಂದಿಸಿ ಶುದ್ಧ ನೀರು ಪೂರೈಸಬೇಕು’ ಎಂದವರು ಆಗ್ರಹಿಸಿದರು. `ಕಳೆದ ಒಂದು ತಿಂಗಳಿoದ ರವೀಂದ್ರ ನಗರದ ಸಾರ್ವಜನಿಕರು ನೀರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ’ ಎಂದು ಬೇಸರವ್ಯಕ್ತಪಡಿಸಿದರು.
`ನೀರಿನ ಸಮಸ್ಯೆ ಬಗೆಹರಿಸದೇ ಇದ್ದರೆ ಹೋರಾಟ ಖಚಿತ’ ಎಂದು ಎಚ್ಚರಿಸಿದರು. `ಪಟ್ಟಣ ಪಂಚಾಯತದ ಮುಂದೆ ಖಾಲಿ ಕೊಡದ ಜೊತೆ ಪ್ರತಿಭಟಿಸಲಾಗುತ್ತದೆ’ ಎಂದು ತಿಳಿಸಿದರು. `ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಆಗುತ್ತದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿಯೇ ಈ ಸಮಸ್ಯೆ ಎದುರಾಗಿದ್ದು ನಾಚಿಕೆಯ ಸಂಗತಿ’ ಎಂದವರು ಹೇಳಿದರು.
Discussion about this post